ಜೂ.30 ರಂದು ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ‌ ಶಿಕ್ಷಕಿ ರತ್ನಾವತಿ ಕೆ. ನಿವೃತ್ತಿ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ರತ್ನಾವತಿ ಕೆ ಯವರು ಸುದೀರ್ಘ 27 ವರ್ಷಗಳ ಕಾಲದ ವೃತ್ತಿ ಸೇವೆಯಿಂದ ಜೂ.30 ರಂದು ನಿವೃತ್ತಿ ಹೊಂದಲಿದ್ದಾರೆ.


ಇವರು ಮೂಲತಃ ಸುಬ್ರಹ್ಮಣ್ಯ ದವರಾಗಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿರುತ್ತಾರೆ. 12.01.1996 ರಲ್ಲಿ ಶಿಕ್ಷಕಿಯಾಗಿ ಗಟ್ಟಿಗಾರು ಸ.ಕಿ.ಪ್ರಾ.ಶಾಲೆಗೆ ಸೇರ್ಪಡೆಗೊಂಡು ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ 2003 ರಿಂದ 2011 ರ ತನಕ ದೇವಚಳ್ಳ ಸ.ಹಿ.ಪ್ರಾ.ಶಾಲೆಯಲ್ಲಿ, 2011 ರಿಂದ 2014 ರ ವರೆಗೆ ಕ್ಷೇತ್ತ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.


2014 ರಿಂದ ಸ.ಹಿ.ಪ್ರಾ.ಶಾಲೆ ಕುಕ್ಕುಜಡ್ಕದಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಜೂ.30 ರಂದು ನಿವೃತ್ತಿಯಾಗಲಿರುವರು. ಇವರ ಪತಿ ಪ್ರಗತಿಪರ ಕೃಷಿಕ ಅನಂತ ಭಟ್ ಕನಿಯಾಲ, ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಅಶ್ವಿನ್ ಕೃಷ್ಣ ಇವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಶ್ರೀಮತಿ ಸಿದ್ಧಿಶ್ರೀ ಇವರು ಭರತನಾಟ್ಯ ಶಿಕ್ಷಕಿಯಾಗಿದ್ದು ಒಂದು ಹೆಣ್ಣುಮಗುವನ್ನು ಹೊಂದಿದ್ದಾರೆ. ಇನ್ನೋರ್ವ ಪುತ್ರ ಆಶ್ವಲ ಭಟ್ ರವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುತ್ತಾರೆ. ಪ್ರಸ್ತುತ ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಎಂಬಲ್ಲಿ ವಾಸವಾಗಿರುತ್ತಾರೆ.