ಮುರುಳ್ಯ ಗ್ರಾಮ ಸಭೆ

0


ಮುರುಳ್ಯ ಗ್ರಾಮ ಸಭೆ ಜೂ. 30ರಂದು ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ ಮುರುಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಯುವಜನ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಾಮೂಲೆ, ಸದಸ್ಯರಾದ ಕರುಣಾಕರ ಗೌಡ ಹುದೇರಿ, ಮೋನಪ್ಪ ಗೌಡ ಅಲೇಕಿ, ಸುಂದರ ಗೌಡ ಶೇರ, ಪಾಪುತ್ತಡಿ, ಶ್ರೀಮತಿ ಲೀಲಾವತಿ ಗೋಳ್ತಿಲ, ಶ್ರೀಮತಿ ಪುಷ್ಪಲತಾಡಿ, ಕುಕ್ಕಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಪಿಡಿಒ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು. ಮುರುಳ್ಯ ಶಾಂತಿನಗರ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಎಸ್ ವರದಿ ವಾಚಿಸಿದರು. ಸಿಬ್ಬಂದಿ ಪ್ರದೀಪ್ ಜಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಜಯಮ್ಮ ಕೆ, ಪಚ್ಚೋಳಿ ಕೆ, ಶ್ರೀಮತಿ ಆಶಾ ಕೆ ಸಹಕರಿಸಿದರು. ಪಂಚಾಯತ್ ಸದಸ್ಯ ಕರುಣಾಕರ ಹುದೇರಿ ವಂದಿಸಿದರು.