ಉಬರಡ್ಕ ಮಿತ್ತೂರು ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಕೆ.ಆರ್ ರವರಿಗೆ ಸನ್ಮಾನ – ಬೀಳ್ಕೊಡುಗೆ

0

ಶಿಕ್ಷಕಿಯಾಗಿ ಸುಮಾರು 29 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಜೂ.30 ರಂದು ಸೇವೆಯಿಂದ ನಿವೃತ್ತಿ ಹೊಂದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕಮಿತ್ತೂರು ಇಲ್ಲಿನ ಶಾಲಾ ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಮೀನಾಕ್ಷಿ ಕೆ ಆರ್ ಇವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ ಮಿತ್ತೂರಿನಲ್ಲಿ ಜೂ.30 ರಂದು ನಡೆಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುರುಷೋತ್ತಮ ಪಾಪುನಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀಮತಿ ಶೀತಲ್, ನರಸಿಂಹ ಶಾಸ್ತಾವು ದೇವಾಲಯ ಉಬರಡ್ಕ ಮಿತ್ತೂರು ಇದರ ಮೊಕ್ತೇಸರರಾದ ರತ್ನಾಕರ ಗೌಡ ಬಳ್ಳಡ್ಕ , ಉಬರಡ್ಕಮಿತ್ತೂರು ಶಾಲಾ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಕಾಡುತೋಟ, ಸಮೂಹ ಸಂಪನ್ಮೂಲ ಕೇಂದ್ರ ಸುಳ್ಯದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ, ಶಾಲಾ ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರಾದ ಶ್ರೀಮತಿ ಚಿತ್ರಲೇಖಾ ಉಪಸ್ಥಿತರಿದ್ದರು.


ಮುಖ್ಯ ಗುರುಗಳಾಗಿ ಭಡ್ತಿ ಹೊಂದಿ ಕಳೆದ ಒಂದು ವರ್ಷದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ ಮಿತ್ತೂರು ಇಲ್ಲಿ ಸೇವೆಯನ್ನು ಸಲ್ಲಿಸಿದ ನಿವೃತ್ತ ಮುಖ್ಯ ಗುರುಗಳಾದ ಮೀನಾಕ್ಷಿ ಕೆ ಆರ್-ಆನಂದ ಗೌಡ ದಂಪತಿಗಳನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುರುಷೋತ್ತಮ ಪಾಪುನಡ್ಕರವರು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.ನಿವೃತ್ತ ಶಿಕ್ಷಕಿಯವರಿಗೆ ಶಾಲಾ ವತಿಯಿಂದ ಗೌರವದ ಕಾಣಿಕೆಯನ್ನು ನೀಡಲಾಯಿತು.ಶಾಲಾ ವಿದ್ಯಾರ್ಥಿಗಳು ಕೃತಜ್ಞತಾ ಪೂರ್ವಕವಾಗಿ ತಮ್ಮ ಉಡುಗೊರೆಯನ್ನು ನೀಡಿದರು.ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಗುರುಗಳು ಶಾಲಾ ಶಿಕ್ಷಕ ವೃಂದಕ್ಕೆ ಉಡುಗೊರೆಯನ್ನು ನೀಡಿದರು. ಶಾಲೆಯಲ್ಲಿ ಸೇವೆಗೈಯುತ್ತಿರುವ ಗೌರವ ಶಿಕ್ಷಕಿಯವರಿಗೆ ಸಂಭಾವನೆ ನೀಡಲು ಧನಸಹಾಯವನ್ನು ನೀಡಿದರು.


ಈ ಸಂದರ್ಭದಲ್ಲಿ ಸುಳ್ಯ ಶಿಕ್ಷಕ ಸಂಘದ ವತಿಯಿಂದ ಗೌರವಾರ್ಪಣೆ ನಡೆಯಿತು.ಶಿಕ್ಷಕರಾದ ಪದ್ಮನಾಭ ,ಶಿವರಾಮ ,ಮಾಯಿಲಪ್ಪ ,ಶೀಲಾವತಿ,ಸರೋಜಿನಿ ಭಾಗವಹಿಸಿದ್ದರು. ಅತಿಥಿಗಳು, ವಿದ್ಯಾರ್ಥಿಗಳ ಹೆತ್ತವರು ,ಪುಟಾಣಿಗಳು ,ಶಾಲಾ ಶಿಕ್ಷಕರು ಎಲ್ಲರೂ ನಿವೃತ್ತ ಶಿಕ್ಷಕಿಯವರಿಗೆ ಶುಭಹಾರೈಕೆಗಳನ್ನು ತಿಳಿಸಿದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶ್ರೀಮತಿ ಚೈತ್ರ ವಂದಿಸಿದರು .ಶ್ರೀಮತಿ ಪ್ರವೀಣ ಕುಮಾರಿ .ಸಿ ಕಾರ್ಯಕ್ರಮ ನಿರೂಪಿಸಿ,ಶಿಕ್ಷಕರಾದ ಶ್ರೀಮತಿ ಧನಲಕ್ಷ್ಮಿ ಸಿ.ಎ, ಶ್ರೀ ಚಂದ್ರಶೇಖರ ಕೆ ಹಾಗೂ ಕುಮಾರಿ ಮಾಲತಿ ಸಹಕರಿಸಿದರು.
ಸಮಾರಂಭದ ಬಳಿಕ ಆಗಮಿಸಿದ ಎಲ್ಲರಿಗೂ ನಿವೃತ್ತ ಮುಖ್ಯ ಗುರುಗಳು ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.