ಕಾಂಗ್ರೆಸ್ ಗ್ಯಾರಂಟಿ : ಮೂರು ಘೋಷಣೆ ಜಾರಿಗೊಳಿಸಿದ ಸರಕಾರ

0

ನಾವು ಬಿಜೆಪಿಯವರಂತೆ ಮಾತು ತಪ್ಪುವುದಿಲ್ಲ. : ಟಿ.ಎಂ.ಶಹೀದ್ ತೆಕ್ಕಿಲ್

ಚುನಾವಣೆ ಸಂದರ್ಭ ಘೋಷಣೆ ಮಾಡಿದಂತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಘೋಷಣೆಗಳನ್ನು ಜಾರಿಗೊಳಿಸಿದೆ. ಇದೀಗ ಒಟ್ಟು ಮೂರು ಯೋಜನೆ ಜಾರಿಯಾಗಿದೆ. ಆ.೧೫ರೊಳಗೆ ನುಡಿದಂತೆ ನಡೆಯುವುದು ಗ್ಯಾರಂಟಿ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಜು.೧ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಸರಕಾರ ಜನರಿಗೆ ನೀಡಲುzಶಿಸಿರುವ ಅನ್ನಭಾಗ್ಯ ಯೋಜನೆಗೆ ಕೇಂದ್ರದ ಬಿಜೆಪಿ ಸರಕಾರ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ತೊಂದರೆ ನೀಡಿ ಅಕ್ಕಿ ಸಿಗದಂತೆ ಮಾಡಿದ್ದಾರೆ. ಆದರೂ ನಾವು ಇತರ ರಾಜ್ಯಗಳನ್ನು ಕೇಳಿzವೆ. ಆರಂಭದಲ್ಲಿ ಘೋಷಣೆ ಮಾಡಿದಂತೆ ಗ್ಯಾರಂಟಿಗಳನ್ನು ಜನರಿಗೆ ನೀಡುವುದಂತೂ ಶತ ಸಿದ್ಧ ಎಂದು ಅವರು ಹೇಳಿದರು.


ನಾವು ಬಿಜೆಪಿಯವರಂತೆ ಮಾತು ತಪ್ಪುವುದಿಲ್ಲ. ಪ್ರಧಾನಿ ಮೋದಿಯವರು ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಅಕೌಂಟ್‌ಗೂ ಹಾಕುವುದಾಗಿ ಹೇಳಿದ್ದರು. ಆದರೆ ಈಗ ಅದೆಲ್ಲ ಎಲ್ಲಿದೆ? ಎಂದು ಶಹೀದ್ ಪ್ರಶ್ನಿಸಿದರು.
ಅನ್ನಭಾಗ್ಯ ಘೋಷಣೆ ಮಾಡಿದ ಬಳಿಕ ಕೇಂದ್ರ ಸರಕಾರದಿಂದ ಅಕ್ಕಿ ಕೊಡಬಾರದೆಂದು ತಡೆದುದೇ ಇಲ್ಲಿಯ ಬಿಜೆಪಿ ನಾಯಕರು. ಅಕ್ಕಿ ಕೊಡಬೇಕು ಎಂದು ಹೇಳುವುದೂ ಬಿಜೆಪಿಯವರೇ. ಅಕ್ಕಿಯನ್ನು ತಪ್ಪಿಸುವುದೂ ಅವರೇ. ಕೆಲವು ಸಂದರ್ಭ ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಯೋಜನೆ ಜಾರಿಯಾದರೆ ಬಿಜೆಪಿಯನ್ನು ಜನ ಮತ್ತಷ್ಟು ದೂರ ಮಾಡುತ್ತಾರೆಂಬ ಭಾವನೆಯಿಂದ ಅವರು ಹೀಗೆಲ್ಲ ಮಾಡುತ್ತಿದ್ದಾರೆ. ಆದರೆ ನಾವು ಹಾಗಲ್ಲ. ಘೋಷಣೆ ಮಾಡಿದ ಯೋಜನೆಯನ್ನು ಜಾರಿ ಮಾಡುತ್ತೇವೆ. ಅರ್ಹತೆ ಇರುವ ಎಲ್ಲರೂ ಅರ್ಜಿ ಹಾಕಬಹುದು. ಬಿಜೆಪಿಯವರು ಕೂಡಾ ಅರ್ಜಿ ಹಾಕಬಹುದು. ಅವರಿಗೆ ಬೇಡವೆಂದರೆ ಬೇಡ ಎಂದು ಹೇಳಿಕೆ ನೀಡಲಿ. ಹೊರತು ಯೋಜನೆಗೆ ತಡೆ ಮಾಡುವುದು ಬೇಡ ಎಂದು ಶಹೀದ್ ಹೇಳಿದರು. ಆ.೧೫ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದೆ. ಯುವ ನಿಧಿ ಯೋಜನೆಯೂ ಜಾರಿಯಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದೀಕ್ ಕೊಕ್ಕೊ, ನ್ಯಾಯವಾದಿ ಮೂಸಾ ಕುಂಞಿ ಪೈಂಬೆಚ್ಚಾಲು, ಎನ್.ಎಸ್.ಯು.ಐ. ಜಿಲ್ಲಾ ಕಾರ್ಯದರ್ಶಿ ಶಹಲ್ ಗಾಂಧಿನಗರ ಇದ್ದರು.