ಕೆಎಫ್‌ಡಿಸಿ ಎಂ.ಡಿ. ರಾಧಾದೇವಿ ಸುಳ್ಯ ಭೇಟಿ

0

ರಬ್ಬರ್ ಕಾರ್ಮಿಕರ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದನೆಯ ಭರವಸೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ತಾಪಕರಾದ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಧಾದೇವಿಯವರು ಇಂದು ಸುಳ್ಯಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಾದೇವಿಯವರು ರಬ್ಬರ್ ತೋಟ ಕಾರ್ಮಿಕರಿಗೆ ಈಗ ಶೇ. ೧೨ ಬೋನಸ್ ನೀಡುತಿದ್ದೇವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ೨೦% ಬೋನಸ್ ನೀಡಲಾಗುವುದು ಕಾರ್ಮಿಕರ, ಅಧಿಕಾರಿಗಳ ಪರಿಶ್ರಮದಿಂದ ನಿಗಮ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಲೆನಾಡು ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫಾ, ಟ್ರಸ್ಟ್ ಪದಾಧಿಕಾರಿ ಸಿದ್ದೀಕ್ ಕೊಕ್ಕೋ, ಕೆಎಫ್‌ಡಿಸಿ ವಿಭಾಗೀಯ ವ್ಯವಸ್ಥಾಪಕ ಹರ್ಷವರ್ಧನ್, ಸುಬ್ರಹ್ಮಣ್ಯ ವಿಭಾಗದ ವಿಭಾಗಿಯ ಉಪ ವ್ಯವಸ್ಥಾಪಕ ಸ್ನೇಹ ಕುಮಾರಿ ಕಾಂಬ್ಳಿ, ಐವರ್ನಾಡು ವಿಭಾಗ ಸಹಾಯಕ ವ್ಯವಸ್ಥಾಪಕ ಅರುಣ್ ಕುಮಾರ್,ಐವರ್ನಾಡು ತೋಟಾಧೀಕ್ಷಕ ಪ್ರದೀಪ್, ಅರಣ್ಯ ರಕ್ಷಕರಾದ ಲೆಜಿ ಜೋಸೆಫ್, ರಾಮಕುಮಾರ್, ಚಾಲಕ ಬಸವರಾಜ್, ಕಾರ್ಮಿಕರುಗಳಾದ ಎಂ. ಎಸ್. ಕುಮಾರ್, ಗಣೇಶ್ ನಾಗಪಟ್ಟಣ ಮೊದಲಾದವರು ಉಪಸ್ಥಿತರಿದ್ದರು.