ಸುಳ್ಯ ಹಳೆಗೇಟು ನಿವಾಸಿ ರಾಘವ ನಾಯಕ್ರವರು ಅಲ್ಪಕಾಲದ ಅಸೌಖ್ಯದಿಂದ ಜು.2ರಂದು ಸಂಜೆ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ನಿವೃತ್ತರಾಗಿದ್ದರು.
ಮೃತರು ಪುತ್ರರುಗಳಾದ ಉದ್ಯಮಿ ಕಿಶನ್, ಸುಳ್ಯ ತಾ.ಪಂ. ವಸತಿ ನೋಡೆಲ್ ಅಧಿಕಾರಿ ಸಂತೋಷ್, ಪುತ್ರಿ ಪಲ್ಲವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.