ಸುಬ್ರಹ್ಮಣ್ಯ : ತಿರುಗಾಡುತ್ತಿದ್ದ ಮಾನಸಿಕ ರೋಗಿಗಳ ರಕ್ಷಣೆ

0

ಸುಬ್ರಹ್ಮಣ್ಯ ಗ್ರಾ. ಪಂ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಸ್ ಐ ಮಂಜುನಾಥ ಹಾಗೂ ಸಿಬಂಧಿಗಳು, ರವಿ ಕಕ್ಕೇಪದವು ಸಮಾಜ ಸೇವಾ ಟ್ರಸ್ಟ್, ಕನಸು ಚಾರಿಟೇಬಲ್ ಟ್ರಸ್ಟ್ ಹಾಗೂ ಕುಕ್ಕೆ ಶ್ರೀ ರಿಕ್ಷಾ ಚಾಲಕರು ಎಲ್ಲರ ಸಹಕಾರದೊಂದಿಗೆ ಸುಬ್ರಹ್ಮಣ್ಯದಲ್ಲಿ ತಿರುಗಾಡುತಿದ್ದ ಮಾನಸಿಕ ರೋಗಿಗಳ ರಕ್ಷಣೆ ಮಾಡಿ ಮಂಜೇಶ್ವರಕ್ಕೆ ಜೂ.29 ರಂದು ಕರೆದೊಯ್ಯಲಾಯಿತು.

ಸುಬ್ರಹ್ಮಣ್ಯ ಪರಿಸರದಲ್ಲಿ ಸುಮಾರು ಒಂದುವರೆ ತಿಂಗಳಿನಿಂದ ಮಾನಸಿಕ ರೋಗಿ ತಿರುಗಾಡುತಿದ್ದ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ ಗೋಮತಿ ನಾಯ್ಡು,
ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಕೊಳಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಕೆಲವೊಂದು ದಿನಗಳಲ್ಲಿ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ ಭಕ್ತಾದಿಗಳ ಮೇಲೆ, ಮಹಿಳೆಯರ ಮೇಲೆ ದಾಳಿ ಮಾಡುತಿದ್ದ ನಡೆದಿದೆ, ವಾಹನಗಳ ಸಂಚಾರ ಮಾಡುವಾಗ ಏಕಾಏಕಿ ವಾಹನದ ಮುಂದೆ ಬಂದು ವಿಚಿತ್ರವಾಗಿ ವರ್ತಿಸುತ್ತಿದ್ದ, ಅಂಗಡಿಯವರಿಗೆ, ಸಾರ್ವಜನಿಕರು ತುಂಬಾ ತೊಂದರೆಗಳಾಗುತ್ತಿದ್ದ ಮತ್ತೋರ್ವ ನ‌ನ್ನು ಮಂಜೇಶ್ವರ ಸ್ನೇಹಾಲಯ ಮಾನಸಿಕ ಪುನರ್ ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.


ಮಂಜೇಶ್ವರ ಸ್ನೇಹಾಲಯದ ಮುಖ್ಯಸ್ಥರಾದ ಜೋಸೆಫ್ ಕ್ರಾಷ್ಟ ಹಾಗೂ ಅವರ ಸಿಬ್ಬಂದಿಗಳು ಆಂಬುಲೆನ್ಸ್ ಮೂಲಕ ರಕ್ಷಣೆ ಮಾಡಿ ಕರೆದುಕೊಂಡು ಹೋದರು. ಸುಬ್ರಹ್ಮಣ್ಯ ಗ್ರಾ. ಪಂ. ಕಾರ್ಯದರ್ಶಿ ಮೋನಪ್ಪ, ಶಿವ ಭಟ್ ಮತ್ತಿತರರು ಸಹಕರಿಸಿದರು.