ನೂತನವಾಗಿ ಬೆಳ್ಳಾರೆಯಲ್ಲಿ ಅಸ್ತಿತ್ವಕ್ಕೆ ಬಂದ ಪುತ್ತೂರು ಲಯನ್ಸ್ ಕ್ಲಬ್ ಮೂಲಕ ಪ್ರವರ್ತಿತವಾದ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ 2023/24 ನೇ ಸಾಲಿಗೆ ಪದಾಧಿಕಾರಿಗಳನ್ನು ಕ್ಲಬ್‌ನ ನಿರ್ದೇಶಕರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ವಿಠಲ ಶೆಟ್ಟಿ ಪೆರ್ವಾಜೆ, ಕಾರ್ಯದರ್ಶಿಯಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸಿಬ್ಬಂದಿ ದಯಾನಂದ ನಾಯ್ಕ್ ಮಠತಡ್ಕ, ಕೋಶಾಧಿಕಾರಿಯಾಗಿ ಜೆ.ಡಿ. ಸಭಾಭವನದ ಮಾಲೀಕರೂ, ಪೆರುವಾಜೆ ಜಲದುರ್ಗ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೂ ಆದ ಪದ್ಮನಾಭ ಶೆಟ್ಟಿ ಪೆರುವಾಜೆ ಪುನರಾಯ್ಕೆಗೊಂಡರು. ಪ್ರಥಮ ಉಪಾಧ್ಯಕ್ಷರಾಗಿ ಕುಂಬ್ರ ದಯಾಕರ ಆಳ್ವ, ದ್ವಿತೀಯ ಉಪಾಧ್ಯಕ್ಷರಾಗಿ ಪೆರುವಾಜೆ ಜಲದುರ್ಗ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಉಮೇಶ್ ಕೆ.ಎಂ.ಬಿ ಹಾಗೂ ಮೆಂಬರ್ಶಿಪ್ ಚೇರ್ ಪರ್ಸನ್ ಉಷಾ ಬಿ.ಭಟ್ ಪೆರುವಾಜೆ, ಎಲ್.ಸಿ.ಐ.ಎಫ್ ಕೋರ್ಡಿನೇಟರ್ ಆಶಿಫ್ ಇಕ್ಬಾಲ್ ಬೆಳ್ಳಾರೆ, ಸರ್ವಿಸ್ ಚೇರ್ ಪರ್ಸನ್ ಪ್ರೀತಮ್ ರೈ ಪೆರುವಾಜೆ , ಕ್ಲಬ್ ನಿರ್ದೇಶಕರಾಗಿ ಹೊನ್ನಪ್ಪ ಸ್ನೇಹ ಎಲೆಕ್ಟ್ರಿಕಲ್ ಬೆಳ್ಳಾರೆ, ವೆಂಕಟ ಕೃಷ್ಣರಾವ್ ಪೆರ್ವಾಜೆ , ಗಣೇಶ್ ರೈ ಸಾರಕರೆ, ಯತೀಶ್ ಭಂಡಾರಿ ಗುತ್ತಮಜಲು, ಉದಯ ಹಾರಿತ್ತಡಿ, ವಿ ಪ್ರೆಸ್ ಬೆಳ್ಳಾರೆ, ಪಿ ಮಂಜಪ್ಪ ರೈ ಬೆಳ್ಳಾರೆ, ಇವರು ಆಯ್ಕೆಯಾಗಿರುತ್ತಾರೆ.