ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಟಿoಕರಿಂಗ್ ಲ್ಯಾಬ್ ಉದ್ಘಾಟನೆ

0

“ಓದಿ ಕಲಿ ಮಾಡಿ ತಿಳಿ‌” ಎಂಬ ಮಾತಿನಂತೆ ವಿಜ್ಞಾನದ ಶಿಕ್ಷಣಕ್ಕೆ ಪ್ರಯೋಗಶಾಲೆ ಅಗತ್ಯ. ಅದರಲ್ಲೂ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಕಲಿಕೆಗೆ ಟಿಂಕರಿಂಗ್ ಲೇಬ್ ಅಗತ್ಯವಿದೆ. ನಮ್ಮ ಶಾಲೆಯಲ್ಲಿ ಇಂತಹ ಒಂದು ಪ್ರಯೋಗಾಲಯವನ್ನು ಸ್ಥಾಪಿಸಿ ಇಬ್ಬರು ಶಿಕ್ಷಕಿಯರಿಗೆ ತರಬೇತಿ ನೀಡಿದ ರೈಟ್ ಟು ಲಿವ್ ಸಂಸ್ಥೆಯು ಸ್ನೇಹ ಶಾಲೆಯ ಶೈಕ್ಷಣಿಕ ಸೌಲಭ್ಯಗಳಿಗೆ ದೊಡ್ಡ ಕೊಡುಗೆ ನೀಡಿದೆ ಎಂಬುದಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.

ಸ್ನೇಹ ಶಿಕ್ಷಣ ಸಂಸ್ಥೆಗೆ ಕೋಟೆ ಫೌಂಡೇಶನ್ ಇದರ ಅಂಗ ಸಂಸ್ಥೆ ರೈಟ್ ಟು ಲಿವ್ ನವರು ಒದಗಿಸಿದ ಟಿಂಕರಿಂಗ್ ಲ್ಯಾಬ್ ನ್ನು ದೀಪ ಬೆಳಗಿಸಿ ಪೂಜೆಯ ಮೂಲಕ ಉದ್ಘಾಟಿಸಿದರು.

ಶಾಲಾ ವಿಜ್ಞಾನ ಶಿಕ್ಷಕಿ ಶ್ರೀಮತಿ ಪ್ರತಿಮಾಕುಮಾರಿ ಕೆ. ಎಸ್. ಇವರು ತಾವು ಪಡೆದ ತರಬೇತಿಯ ಅನುಭವ ಮತ್ತು ಟಿಂಕರಿಂಗ್ ಲ್ಯಾಬ್ ಇದರ ಪ್ರಯೋಜನವನ್ನು ಕುರಿತು ಮಾತನಾಡಿದರು. ಮುಂದೆ ಕಾರ್ಯಕ್ರಮದ ಅತಿಥಿಗಳಾಗಿದ್ದ ಗೂಗಲ್ ನ ಪ್ರಾಡಕ್ಟ್ ಮ್ಯಾನೇಜರ್ ಶ್ರೇಯಾ ಗಣೇಶ ರವರು ಟಿಂಕರಿಂಗ್ ಲ್ಯಾಬ್ ನ ಉಪಯುಕ್ತತೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕ ವರ್ಗ, ರೈಟ್ ಟು ಲಿವ್ ನ ನಿರ್ದೇಶಕ ಶ್ರೀ ಸಾಯಿರಂಜನ್ ಕಲ್ಚಾರ್, ಟಾನ್ 90 ಕಂಪನಿಯ ತರಬೇತುದಾರರಾದ ಜಯಂತ್, ಮೇಧಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಪೂರ್ಣವಾಗಿ ಜೂಮ್ ತಂತ್ರಜ್ಞಾನದ ಮೂಲಕ ಆನ್ ಲೈನ್ ನಲ್ಲಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹೊಸ ಅನುಭವವಾಗಿತ್ತು. ಆರಂಭದಲ್ಲಿ ರೈಟ್ ಟು ಲಿವ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಟಿ. ವಿ. ಶ್ರೀಧರ್ ರವರು ಸ್ವಾಗತಿಸಿದರು. ವೀರೇಶ್ ಕಾರ್ಯಕ್ರಮ ನಿರೂಪಿಸಿ, ರೈಟ್ ಟು ಲಿವ್ ನ ಪ್ರೋಗ್ರಾಮ್ ಮ್ಯಾನೇಜರ್ ಶಾಂಭವಿ ವಂದಿಸಿದರು.