ಕುರುoಜಿಭಾಗ್ ನ ಉಜುರುಗುಳಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬ ಧರಾಶಾಹಿ

0

ಕುರುoಜಿಭಾಗ್ ನ ಉಜುರುಗುಳಿಯಲ್ಲಿ ಇಂದು ಸುರಿದ ಗಾಳಿ ಮಳೆಗೆ ವಿದ್ಯುತ್ ಲೈನಿನ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಇದರಿಂದಾಗಿ ಉಜುರುಗುಳಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಜಿರುಗುಳಿ ರಸ್ತೆಯಲ್ಲಿ ಕಾಂಕ್ರೀಟ್ ಕೆಲಸ ನಡೆಯುತ್ತಿತ್ತು. ಕೆಲಸಗಾರರು ಮದ್ಯಾಹ್ನ ಊಟಕ್ಕೆ ತೆರಳಿದ್ದಾಗ ಈ ಘಟನೆ ನಡೆದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.