ಪರವಾನಿಗೆ ರಿನೀವಲ್ – ತೆರಿಗೆ ಪಾವತಿಸದೆ ಬಾಕಿ
ಸುಳ್ಯದಿಂದ ಅಜ್ಜಾವರ – ಮಂಡೆಕೋಲು ಗ್ರಾಮಗಳಿಗೆ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್ ಗಳನ್ನು ಆರ್.ಟಿ.ಒ. ಅಧಿಕಾರಿಗಳು ಎರಡು ದಿನದ ಹಿಂದೆ ಸೀಝ್ ಮಾಡಿರುವುದಾಗಿ ತಿಳಿದುಬಂದಿದೆ.
ಅಜ್ಜಾವರ ಮಂಡೆಕೋಲು – ಅಡೂರುಗೆ ತೆರಳುತ್ತಿದ್ದ ಖಾಸಗಿ ಬಸ್ಸ್ ಒಂದು ಲಕ್ಷದ ಹನ್ನೆರಡು ಸಾವಿರ ತೆರಿಗೆ ಹಾಗೂ ಇನ್ನೊಂದು ಬಸ್ಸು ಸುಮಾರು ಮೂವತ್ತೊಂಬತ್ತು ಸಾವಿರ ಟ್ಯಾಕ್ಸ್ ಉಳಿಕೆ ಮಾಡಿಕೊಂಡಿದೆ. ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಬಸ್ಸುಗಳನ್ನು ಓಡಿಸುತ್ತಿರುವ ಕುರಿತು ಸಾರಿಗೆ ಇಲಾಖೆಗೆ ದೂರು ಹೋಗಿತ್ತೆನ್ನಲಾಗಿದೆ.
ಪರವಾನಗಿ ನವೀಕರಣ ಹಾಗೂ ತೆರಿಗೆ ಉಳಿಸಿ ಕೊಂಡಿರುವ ಎರಡು ಬಸ್ ಗಳನ್ನುಸೀಝ್ ಮಾಡಲಾಗಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಆರ್.ಟಿ.ಒ.ಅಧಿಕಾರಿ ವಿಶ್ವನಾಥ್ ರವರು ಸುದ್ದಿಗೆ ತಿಳಿಸಿದ್ದಾರೆ.