ಜು.16 ರಂದು ಸುಬ್ರಹ್ಮಣ್ಯದಲ್ಲಿ ಸಮಾಲೋಚನಾ ಸಭೆ ಮತ್ತು ಕಾರ್ಯಗಾರ

0

ದ.ಕ ಜಿಲ್ಲಾ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ಲುರವರಿಂದ ಮಾಹಿತಿ

ದ. ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ಮತ್ತು ದ. ಕ. ಜಿಲ್ಲಾ ಕಬಡ್ಡಿ ತಿರ್ಪುಗಾರರ ಮಂಡಳಿ ಹಾಗೂ ಸುಳ್ಯ ತಾಲೂಕು ಮತ್ತು ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಬಡ್ಡಿ ನಿರ್ಣಾಯಕ ಸಮಾಲೋಚನಾ ಸಭೆ ಮತ್ತು ಕಾರ್ಯಗಾರ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ, ವಿದ್ಯಾನಗರ ಇಲ್ಲಿ ಜು. 16 ರಂದು ನಡೆಲಿದೆ ಎಂದು ದ.ಕ ಜಿಲ್ಲಾ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ಲು ಜು.8 ರಂದು ಸುಬ್ರಹ್ಮಣ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂತರ್ ರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುತ್ತಿರುವ ಕಬಡ್ಡಿಯಲ್ಲಿ ಆದ ಬದಲಾವಣೆ, ನಿರ್ಣಯಗಳ ಬಗ್ಗೆ ಪುನಶ್ಚೇತನ ಶಿಬಿರ ಇದಾಗಿದೆ ಎಂದವರು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿಲಿದ್ದು, ಕರ್ನಾಟಕ ರಾಜ್ಯ ಮತ್ತು ದ.ಕ. ಜಿಲ್ಲಾ ಅಮೆಚೂರ್
ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ.


ಅತಿಥಿಗಳಾಗಿ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಜಯಪ್ರಕಾಶ ರೈ, ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ ಗೌರವಾಧ್ಯಕ್ಷರು ನಿತ್ಯಾನಂದ ಮುಂಡೋಡಿ,ಅನುಗ್ರಹ ಎಜುಕೇಶನ್ ಟ್ರಸ್ಟ್ (ರಿ), ಸುಬ್ರಹ್ಮಣ್ಯ ಅಧ್ಯಕ್ಷರಾದ ಗಣೇಶ್‌ ಪ್ರಸಾದ್ , ದ. ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷರಾದ ಪುರುಷೋತ್ತಮ ಪೂಜಾರಿ, ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಷಣ್ಮುಗಂ , ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ರತನ್ ಶೆಟ್ಟಿ , ಕುಮಾರಸ್ವಾಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಚಂದ್ರಶೇಖರ ನಾಯರ್, ಭಾಗವಹಿಸಿದ್ದಾರೆ.


ಸಂಪನ್ಮೂಲ ವ್ಯಕ್ತಿಗಳಾಗಿ , ರಾಜ್ಯ ತೀರ್ಪುಗಾರರ ಮಂಡಳಿ ಉಪಾಧ್ಯಕ್ಷರಾದ ಶಿವಲಿಂಗಪ್ಪ, ವಿಶ್ವವಿದ್ಯಾನಿಲಯ ಕಾಲೇಜು, ಬನ್ನಡ್ಕ ದೈಹಿಕ ಶಿಕ್ಷಣ ನಿರ್ದೇಶಕ,
ರಾಷ್ಟ್ರೀಯ ಕಬಡ್ಡಿ ತರಬೇತುದಾರರಾದ ಕಿರಣ್ ಅರಂಪಾಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.