ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಗ್ರಾಮದ ಅಭಿವೃದ್ಧಿ ಬಗ್ಗೆ ಸಂಜೆವರೆಗೆ ನಡೆದ ಸುದೀರ್ಘ ಚರ್ಚೆ

ಲಂಚ,ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲಕ ಅನಾವರಣ

ಬೆಳ್ಳಾರೆ ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರ ಅಧ್ಯಕ್ಷತೆಯಲ್ಲಿ ಜು.12 ರಂದು ಬೆಳ್ಳಾರೆ ಎ.ಪಿ.ಎಂ.ಸಿ‌ ಪ್ರಾಂಗಣದಲ್ಲಿ ನಡೆಯಿತು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ನೋಡೆಲ್ ಅಧಿಕಾರಿಯಾಗಿದ್ದರು.


ಪಂಚಾಯತ್ ಕಾರ್ಯದರ್ಶಿ ತಿರುಮಲೇಶ್ವರರವರು ಸ್ವಾಗತಿಸಿ,ಪಿಡಿಒ ಶ್ಯಾಮ್ ಪ್ರಸಾದ್ ರವರು ಪ್ರಾಸ್ತಾವಿಕ ಮಾತನಾಡಿ ವರದಿ ಮಂಡಿಸಿದರು.


ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು ಸದಸ್ಯರಾದ ಎಸ್.ಮಣಿಕಂಠ, ಶ್ರೀಮತಿ ಭವ್ಯ ಆರ್, ಶ್ರೀಮತಿ ವಿಣಾ, ಶ್ರೀಮತಿ ಜಯಶ್ರೀ, ದಿನೇಶ್ಚಂದ್ರ ಬಿ.ಹೆಗ್ಡೆ, ಶ್ರೀಮತಿ ನಮಿತ ಕೆ.ಎಲ್.ರೈ, ಎನ್.ಎಸ್.ಡಿ.ವಿಠಲದಾಸ್,ಶ್ರೀಮತಿ ಮೋಹಿನಿ ಕೆ.ಟಿ ಮತ್ತು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


ಇಲಾಖಾಧಿಕಾರಿಗಳು ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರು.