ಗುತ್ತಿಗಾರು ಗ್ರಾ.ಪಂ ಸಭೆ

0

ಸಂತೆ ಮಾರುಕಟ್ಟೆ, ಮೆಟಿರಿಯಲ್ ಬಿಲ್ ಬಗ್ಗೆ, ಸ್ಮಶಾನ ಜಾಗದ ಬಗ್ಗೆ, ಲೈನ್ ಮೆನ್ ಗಳ ಕೊರತೆ ಬಗ್ಗೆ ಚರ್ಚೆ

ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ, ಪ್ರತಿಜ್ಞೆ

ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮಗಳನ್ನೊಲಗೊಂಡ ಗುತ್ತಿಗಾರು ಗ್ರಾ.ಪಂ ನ ಗ್ರಾಮ ಸಭೆ ಇಂದು ಗ್ರಾ.ಪಂ ಪ.ವರ್ಗದ ಸಭಾಭವನದಲ್ಲಿ ನಡೆಯಿತು.

ಗ್ರಾಮ ಸಭೆಯಲ್ಲಿ ಸಂತೆ ಮಾರುಕಟ್ಟೆ ಸೋರುವ ಬಗ್ಗೆ, ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಮೆಟಿರಿಯಲ್ ಬಿಲ್ ಬಗ್ಗೆ, ಸ್ಮಶಾನ ಜಾಗದ ಬಗ್ಗೆ, ವಿದ್ಯುತ್ ಲೈನ್ ಮೆನ್ ಗಳ ಕೊರತೆ ಬಗ್ಗೆ, ಶಿಕ್ಷಕರ ಕೊರತೆ ಬಗ್ಗೆ, ಚರಂಡಿ ಸಮಸ್ಯೆ ಬಗ್ಗೆ ಚರ್ಚೆಗಳಾಯಿತು.

ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ ವಹಿಸಿದ್ದರು, ಕ್ಷೇತ್ರ ಸಮನ್ವಯ ಅಧಿಕಾರಿ ಶೀತಲ್ ಅವರು ನೋಡೆಲ್ ಅಧಿಕಾರಿಯಾಗಿದ್ದರು. ವೇದಿಕೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ ಎರ್ದಡ್ಕ, ಪಿಡಿಒ ಧನಪತಿ, ಗ್ರಾ.ಪಂ ಸದಸ್ಯರುಗಳಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮತ, ಶಾರದ ಮುತ್ಲಾಜೆ, ಮಂಜುಳಾ ಮುತ್ಲಾಜೆ, ಮಾಯಿಲಪ್ಪ ಕೊಂಬೊಟ್ಟು, ಅನಿತಾ ಕುಮಾರಿ, ಹರೀಶ್ ಕೊಯಿಲ, ಲತಾಕುಮಾರಿ ಆಜಡ್ಕ, ಲೀಲಾವತಿ ಅಂಜೇರಿ, ವಿನಯ ಸಾಲ್ತಾಡಿ, ಸುಮಿತ್ರಾ ಮೂಕಮಲೆ, ಭಾರತಿ ಸಾಲ್ತಾಡಿ, ಜಗದೀಶ ಬಾಕಿಲ, ಉಪಸ್ಥಿತರಿದ್ದರು.


ವಿಜಯ ಕುಮಾರ್ ಚಾರ್ಮತ ಸ್ವಾಗತಿಸಿ, ವೆಂಕಟ್ ವಳಲಂಬೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ ಸಿಬ್ಬಂದಿ ಅನಿತಾ ವರದಿ ವಾಚಿಸಿದರು. ಪ್ರಮೀಳಾ ಎರ್ದಡ್ಕ ವಂದಿಸಿದರು.
ಗ್ರಾ.ಪಂ ಸಿಬ್ಬಂದಿ ತೇಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ವಿಜಯ ಜೆ.ಡಿ, ಗುತ್ತಿಗಾರು ಮೆಸ್ಕಾಂ ಕಿ.ಇಂ. ಹರೀಶ್, ತೋಟಗಾರಿಕಾ ಇಲಾಖೆಯ ಮಧುಶ್ರೀ, ಪಶುವೈದ್ಯ ಡಾ.ವೆಂಕಟ ಚಲಪತಿ, ಕೃಷಿ ಇಲಾಖೆಯ ಸುಹಾಸ್, ಗ್ರಾಮ ಆಡಳಿತಾಧಿಕಾರಿ ಶ್ರೀಲೇಖಾ, ಪೊಲೀಸ್ ಇಲಾಖೆಯ ಆಕಾಶ್, ಶಿಕ್ಷಣ ಇಲಾಖೆಯ ಸಂತೋಷ್ ಮಾಹಿತಿ ನೀಡಿದರು.

ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ
ಗ್ರಾಮ ಸಭೆಯಲ್ಲಿ
ಸುದ್ದಿ ಮಾದ್ಯಮ ದ ಸಹಯೋಗದಲ್ಲಿ ನಡೆಯುವ ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ ಹಾಗೂ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಜರಗಿತು. ಸುದ್ದಿ ಬಿಡುಗಡೆ ವರದಿಗಾರ ಶಿವರಾಮ ಕಜೆಮೂಲೆ ಹಾಗೂ ಯತೀಶ್ ಕದ್ರ ನಡೆಸಿಕೊಟ್ಟರು.