ಕೊಲ್ಲಮೊಗ್ರು : ‘ನಲಿ ಕಲಿ’ ವಿಭಾಗದ ನೂತನ ವಿದ್ಯಾ ಮಂದಿರ ಉದ್ಘಾಟನೆ

0

ಕೊಲ್ಲಮೊಗ್ರು ಬಂಗ್ಲೆಗುಡ್ಡೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನಲಿ ಕಲಿ’ ವಿಭಾಗದ ನೂತನ ವಿದ್ಯಾ ಮಂದಿರ ಉದ್ಘಾಟನೆ ಕಾರ್ಯಕ್ರಮ ಜು.15 ರಂದು ನಡೆಯಿತು.


ಪ್ರಗತಿ ಪರಕೃಷಿಕ, ದಾನಿಗಳಾದ ಭವಾನಿ ಶಂಕರ್ ಪಿಂಡಿಮನೆ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಚಾಂತಳ, ಸದಸ್ಯ ಮಾಧವ ಚಾಂತಳ, ಶ್ರೀ ಕ್ಷೇತ್ರ ಧರ್ಮಸ್ಥಳಧ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸಾವಿತ್ರಿ ನೀಡುಬೆ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ. ಇ,ಮುಖ್ಯೋಪಾಧ್ಯಾಯಿನಿ
ಕಮಲಾ ಎ, ಎಸ್ ಡಿ ಎಂ ಸಿ ಅಧ್ಯಕ್ಷ, ಬಾಲಸುಬ್ರಹ್ಮಣ್ಯ ಎನ್. ಜಿ ಮತ್ತು ದಾನಿಗಳಾದ ಕಟ್ಟ ನಾರಾಯಣಯ್ಯ ಹಾಗೂ ಕೊಲ್ಲಮೊಗ್ರು ಹರಿಹರ ಪಲ್ಲತ್ತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ ಅಂಬೆಕಲ್ಲು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಕೋನಡ್ಕ , ಎಸ್ ಡಿ ಎಂ ಸಿ ಪೂರ್ವಾಧ್ಯಕ್ಷ ಚಂದ್ರಶೇಖರ ಕೊಂದಳ, ವಿದ್ಯಾರ್ಥಿ ನಾಯಕ ಆದಿತ್ಯ ಡಿ.ಜೆ ಮೊದಲಾದವರು ಉಪಸ್ಥಿತರಿದ್ದರು.


ಲಕ್ಷ್ಮೀಶ್ ಶಿರೂರು ರವರು ಶಾಲೆಗೆ ಕಂಪ್ಯೂಟರ್, ಲೈಬ್ರರಿ,ಆಟದ ಸಲಕರಣೆ ಮತ್ತು ದೇಣಿಗೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಕಮಲಾ ಎ ಸ್ವಾಗತಿಸಿದರು ಶಿಕ್ಷಕ ಸುಭಾಷ್ ವರದಿ ವಾಚಿಸಿದರು.


ಬಾಲಸುಬ್ರಹ್ಮಣ್ಯ ಎನ್ ಜಿ ವಂದಿಸಿದರು
ಶಿಕ್ಷಕಿ ರೇಷ್ಮಾ ನಿರೂಪಿಸಿದರು.