‘ಗ್ರಂಥಮಿತ್ರ’ ಯೋಜನೆಗೆ ಮಂಡೆಕೋಲು, ಜಾಲ್ಸೂರು ಗ್ರಂಥಾಲಯ ಆಯ್ಕೆ

0

ಗ್ರಾಮೀಣ ಮಕ್ಕಳ ಕಲಿಕಾ ಗುಣಮಟ್ಟ ವೃದ್ಧಿಗೆ ಅವಕಾಶ

ರಾಜ್ಯ ಸರಕಾರ ಗ್ರಂಥಾಲಯಗಳ ‌ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ವೃದ್ಧಿಸಲು ಯೋಜನೆಯನ್ನು ರೂಪಿಸಿದ್ದು ಅದಕ್ಕಾಗಿ ಗ್ರಾಮ ಗ್ರಂಥಾಲಯಗಳ ಮೂಲಕ ಯೋಜನೆ ಅನುಷ್ಠಾನಕ್ಕೆ ಮುನ್ನುಡಿ ಇಟ್ಟಿದೆ. ಸುಳ್ಯ ತಾಲೂಕಿನಲ್ಲಿ ಮಂಡೆಕೋಲು ಹಾಗೂ ಜಾಲ್ಸೂರು ಎರಡು ಗ್ರಾಮಗಳು ಗ್ರಂಥಮಿತ್ರ ಯೋಜನೆಗೆ ಆಯ್ಕೆಯಾಗಿವೆ.

ಉದ್ದೇಶ : ಈ ಯೋಜನೆಯ‌ಮುಖ್ಯ ಉದ್ದೇಶವೆಂದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕಾ ಗುಣಮಟ್ಟ ಹೆಚ್ಚಿಸುವುದು. ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕುರಿತು ತರಬೇತಿ ಮತ್ತು ಸ್ವಯಂ ಪ್ರೇರಣೆ ಮೂಡಿಸುವುದು. ಜೀವನ ಕೌಶಲ್ಯ ದ ಮಾಹಿತಿ ನೀಡುವುದು, ಗ್ರಾಮ ವ್ಯಾಪ್ತಿಯ ಸಾಧಕರ ಮತ್ತು ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತರ ಪ್ರತಿಭೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು. ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಹಂತದ‌ ಕುರಿತು ಮಾಹಿತಿ ನೀಡುವುದು, ವ್ಯಕ್ತಿತ್ವ ವಿಕಸನ ಹೀಗೆ ಯೋಜನೆ ಹಾಕಿಕೊಳ್ಳಲಾಗಿದೆ.

ಮಂಡೆಕೋಲಿನಲ್ಲಿ ಚಾಲನೆ : ಗ್ರಂಥಮಿತ್ರ ಯೋಜನೆಗೆ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸಹಯೋಗ ನೀಡುತ್ತಿದ್ದು ಜು. 15ರಂದು ಮಂಡೆಕೋಲು ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.


7,8,9,10ನೇ ತರಗತಿಯ ವಿದ್ಯಾರ್ಥಿಗಳು ಸರಕಾರಿ ಪ್ರೌಢ ಶಾಲೆ ಅಜ್ಜಾವರ ಮತ್ತು ಸರಕಾರಿ ಉನ್ನತ್ತೀಕರೀಸಿದ ಶಾಲೆ ಮಂಡೆಕೋಲು ಇಲ್ಲಿಯ ವಿದ್ಯಾರ್ಥಿಗಳ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನುತಾ ಪಾತಿಕಲ್ಲು, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಶ್ರದ್ದಾ ಕಣೆಮರಡ್ಕ ಪ್ರಾರ್ಥಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನಿಲ್ ತೋಟಪ್ಪಾಡಿ, ಮಂಡೆಕೋಲು ಶಾಲೆಯ ಸಹಶಿಕ್ಷಕಿ ಅನುಷಾ, ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ಸುಶ್ಮಿತಾ,‌ ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕರು ಸಾವಿತ್ರಿ ಕಣೆಮರಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಮಿತಾ ಕಣೆಮರಡ್ಕ ವಂದಿಸಿದರು.