ಸುಳ್ಯ ನಗರದ ಚರಂಡಿ ಸ್ಲ್ಯಾಬ್ ಸರಿಪಡಿಸಿ

0

ನ.ಪಂ. ಗೆ ಮನವಿ

ಸುಳ್ಯ‌ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರುವ ರಾಷ್ಟ್ರೀಯ ಹೆದ್ದಾರಿ 275 ರ ಚರಂಡಿ ಮತ್ತು ಫುಟ್ ಪಾತ್ ಸ್ಲ್ಯಾಬ್ ದುರಸ್ತಿ ಪಡಿಸುವಂತೆ ನ.ಪಂ. ಗೆ‌ ಸಾಮಾಜಿಕ ಕಾರ್ಯಕರ್ತ ಹಳೆಗೇಟಿ ವಹಾಬ್ ಮನವಿ ಸಲ್ಲಿಸಿದ್ದಾರೆ.

ರಸ್ತೆ ಬದಿಯ ಚರಂಡಿ ಹಾಗೂ ಸ್ಲ್ಯಾಬ್ ಗಳು ನಾದುರಸ್ತಿಯಲ್ಲಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಈ ಸಮಸ್ಯೆ ‌ಮನಗಂಡು ತಾವು ಸೂಕ್ತ ‌ಕ್ರಮಕೈಗೊಳ್ಳುವಂತೆ‌ನ.ಪಂ. ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಅವರು‌ ತಿಳಿಸಿದ್ದಾರೆ.