ಐದು ವರ್ಷಗಳ ಅಲೆದಾಟದ ಬಳಿಕ ಆಧಾರ್ ಕಾರ್ಡ್ ಪಡೆದುಕೊಂಡ ವಿಕಲಚೇತನ ವ್ಯಕ್ತಿ

0

ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಕೇಂದ್ರದ ವತಿಯಿಂದ ಆಧಾರ್ ಕಾರ್ಡ್ ಹಸ್ತಾಂತರ


ಐದು ವರ್ಷಗಳ ಅಲೆದಾಟದ ಬಳಿಕ ವಿಕಲಚೇತನ ವ್ಯಕ್ತಿಯೊಬ್ಬರು ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ.

ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ನಿವಾಸಿ ಜಯರಾಮ ಎಂಬುವವರು ಅವರಿಗೆ ಆಧಾರ್ ಕಾರ್ಡ್ ಇಲ್ಲದೆ ನಾನಾ ರೀತಿಯ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದೀಗ ಐದು ವರ್ಷಗಳ ಬಳಿಕ ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಸೇವಾ ಕೇಂದ್ರದಿಂದ ಆಧಾರ್ ಕಾರ್ಡ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಧಾರ್ ಕಾರ್ಡ್ ಸಂಬಂಧಿಸಿ ಜಯರಾಮ ರವರು ಮಂಗಳೂರು,ಸುಳ್ಯದ ವಿವಿಧ ಕಚೇರಿಗಳಲ್ಲಿ ಮನವಿಗಳನ್ನು ಸಲ್ಲಿಸಿ ತಾವು ವಿಕಲಚೇತನರಾಗಿದ್ದರೂ ಕೂಡ ಇದರ ಹಿಂದೆ ನೂರಾರು ಅಲೆದಾಟವನ್ನು ಮಾಡಿದ್ದಾರೆ. ಎರಡು ಕಾಲುಗಳ ಬಲಹೀನತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಇವರು ಅವರ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕೇಂದ್ರದಿಂದ ಆದ ತಪ್ಪಿನಿಂದ ಇವರಿಗೆ ಆಧಾರ್ ಕಾರ್ಡ್ ಇದುವರೆಗೂ ಬಂದಿರುವುದಿಲ್ಲ.ಕೊನೆಯದಾಗಿ ಸುಳ್ಯದ ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ಸ್ ರವರ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಸೇವಾ ಕೇಂದ್ರಕ್ಕೆ ತೆರಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಇದಕ್ಕೆ ಕೂಡಲೇ ಸ್ಪಂದಿಸಿದ ರಿಯಾಝ್ ರವರು ಅದರ ಹಿಂದೆ ಸತ ಪ್ರಯತ್ನಗಳನ್ನು ಮಾಡಿ ಕೊನೆಗೂ ಫಲಾನುಭವಿಗೆ ಆಧಾರ್ ಕಾರ್ಡ್ ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ.

ಈ ಆಧಾರ್ ಕಾರ್ಡನ್ನು ಫಲಾನುಭವಿ ಜಯರಾಮರವರಿಗೆ ಜುಲೈ ೨೦ರಂದು ಗಾಂಧಿನಗರ ಮಲೆನಾಡು ಸೇವಾ ಕೇಂದ್ರದಲ್ಲಿ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಸದಸ್ಯ ಹಾಜಿ ಮುಸ್ತಫ ಜನತಾ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.

ಈ ವೇಳೆ ಸುದ್ದಿಯೊಂದಿಗೆ ಮಾತನಾಡಿರುವ ಜಯರಾಮರವರು ಕಳೆದ ಐದು ವರ್ಷಗಳಿಂದ ಆಧಾರ್ ಕಾರ್ಡಿಗಾಗಿ ಬಹಳ ಕಡೆಗಳಲ್ಲಿ ಅಲೆದಾಟ ಮಾಡಿದ್ದೇನೆ. ಆಧಾರ್ ಕಾರ್ಡ್ ಮಾಡುವ ಪ್ರಾರಂಭದ ಸಂದರ್ಭದಲ್ಲಿ ನನ್ನ ಮತ್ತು ತಾಯಿಯವರ ತಂಬು ಒಂದೇ ಆದ ಕಾರಣ ತಾಯಿಯವರ ಆಧಾರ್ ಕಾರ್ಡಿ ಬಂದಿತ್ತು. ಆದರೆ ನನಗೆ ಇಂದಿನವರೆಗೆ ಆಧಾರ್ ಕಾರ್ಡ್ ಬರಲಿಲ್ಲ. ಇದು ಇಲ್ಲದ ಕಾರಣ ನನಗೆ ಸರಕಾರದಿಂದ ಬರುತ್ತಿದ್ದ ವಿಕಲಚೇತನರ ಮಾಸಿಕ ಧನಸಹಾಯವು ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಅಲ್ಲದೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇದರ ಹಿಂದೆ ಓಡಾಡುವ ಶಕ್ತಿಯನ್ನು ಕೂಡ ಕಳೆದುಕೊಂಡಿದ್ದೆ. ಆದರೆ ರಿಯಾಝ್ ರವರ ಸತ ಪ್ರಯತ್ನದಿಂದ ಇದೀಗ ಆಧಾರ್ ಕಾರ್ಡ್ ನನಗೆ ಲಭಿಸಿದ್ದು ತುಂಬಾ ಸಂತೋಷ ತಂದಿದೆ ಎಂದು ಹೇಳಿದ್ದಾರೆ.