ಗುತ್ತಿಗಾರು : ಸ್ತ್ರೀಶಕ್ತಿ ಗುಂಪು ವತಿಯಿಂದ ಬಟ್ಟೆ ಚೀಲ ಬಿಡುಗಡೆ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾಮ ಪಂಚಾಯತ್ ಗುತ್ತಿಗಾರು ಶ್ರೀಕೃಷ್ಣ ಸ್ತ್ರೀಶಕ್ತಿ ಗುಂಪು ಗುತ್ತಿಗಾರು ವತಿಯಿಂದ
ಪ್ಲಾಸ್ಟಿಕ್‌ ಮುಕ್ತ ಗ್ರಾಮದೆಡೆಗೆ ಮೊದಲ ಹೆಜ್ಜೆಯಾಗಿ ಶ್ರೀಕೃಷ್ಣ ಸ್ತ್ರೀಶಕ್ತಿ ಗುಂಪು ಇವರು ತಯಾರಿಸಿದ ಬಟ್ಟೆ ಚೀಲ ಬಿಡುಗಡೆ ಕಾರ್ಯಕ್ರಮ ಜೂ.15 ರಂದು ಗ್ರಾ. ಪಂ. ವರ್ಗದ ಸಭಾಭವನ ಗುತ್ತಿಗಾರು ಇಲ್ಲಿ ನಡೆಯಿತು. ಸ್ರ್ತೀಶಕ್ತಿ ಗೊಂಚಲಿನ ಅಧ್ಯಕ್ಷೆ ಸೆಲಿನಾ ಅಧ್ಯಕ್ಷತೆ ವಹಿಸಿದ್ದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ, ಮಂಗಳೂರು ಇದರ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರಶ್ಮಿ ಕೆ.ಎಂ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಇದರ
ವಲಯ ಮೇಲ್ವಿಚಾರಕಿ ವಿಜಯ ಜೆ.ಡಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ರಶ್ಮಿ ನೆಕ್ರಾಜೆ ಅವರನ್ನು ಸನ್ಮಾನಿಸಲಾಯಿತು.


ಯಶೋದಾ ದೇವ ಸ್ವಾಗತಿಸಿ, ನಿರ್ಮಲಾ ಪ್ರಾರ್ಥಿಸಿದರು. ದಿವ್ಯಾ ಎಂ.ಬಿ ಪ್ರಸ್ತಾವಿಕವಾಗಿ ಮಾತನಾಡಿದರು. ಅನಿತಾ ಮಹೇಶ್ ಸಂಘದ ವರದಿ ವಾಚಿಸಿದರು, ಕವಿತಾ ಎನ್ ಕೆ ಧನ್ಯವಾದ ವಿತ್ತರು. ಯಮಿತಾ ಪೂರ್ಣಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಸ್ತ್ರೀಶಕ್ತಿ ಗುಂಪು ಗುತ್ತಿಗಾರು, ಶಂಖಶ್ರೀ ಸ್ತ್ರೀ ಶಕ್ತಿ ಗೊಂಚಲು ಮತ್ತಿತರ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.