ಕಲ್ಮಡ್ಕ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕಂಪ್ಯೂಟರ್ ಕೊಡುಗೆ

0


ಕಲ್ಮಡ್ಕ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದಿoದ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಿದರು.


ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಡಿಜಿಟಲೀಕರಣದ ಉದ್ಘಾಟನೆಯನ್ನು ಪಂಚಾಯತಿನ ಮಾಜಿ ಅಧ್ಯಕ್ಷರು ಕಲ್ಮಡ್ಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಉದಯಕುಮಾರ್ ಬೆಟ್ಟ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದ್ಯಸರಾದ ಶ್ರೀ ಲೋಕೇಶ ಆಕ್ರಿಕಟ್ಟೆ, ಹರೀಶ್.ಎಂ, ಲೋಕಯ್ಯ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪ್ರವೀಣ್ ಕುಮಾರ್ ಸಿ.ವಿ, ಶ್ರೀ ಪ್ರಶಾಂತ್ ಜೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಲ್ಮಡ್ಕ , ಶ್ರೀ ಗೋಪಾಲಕೃಷ್ಣ ಕೆ ಕಾರ್ಯದರ್ಶಿ, ಗ್ರಂಥಪಾಲಕಿ, ಪಂಚಾಯತ್ ಸಿಬ್ಬಂದಿಯಾದ ಶೇಷಪ್ಪ ಎ ವಿ , ಕಲ್ಮಡ್ಕ ಶಾಲಾಮುಖ್ಯ ಶಿಕ್ಷಕಿ, ಅಂಗನವಾಡಿ ಕಾರ್ಯಕರ್ತೆ, ಗ್ರಾಮಸ್ಥರು ಉಪಸ್ಥಿತರಿದ್ದರು.