ಪೆರುವಾಜೆ ದೇವಸ್ಥಾನದಲ್ಲಿ ನೂತನ ರಥಕ್ಕೆ ಮರದ ಬೇಡಿಕೆ – ಭಕ್ತರಿಗೆ ಮನವಿ

0

ನವಂಬರ್ ತಿಂಗಳಲ್ಲಿ ಶ್ರೀ ದೇವಿಗೆ ನೂತನ ರಥ ಸಮರ್ಪಣೆ

ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ಬ್ರಹ್ಮರಥದ ನಿರ್ಮಾಣ ಕಾರ್ಯವು ಭರದಿಂದ ನಡೆಯುತ್ತಿದೆ.
1.10 ಕೋಟಿ ರೂ ವೆಚ್ಚದಲ್ಲಿ ಕೆತ್ತನೆ ಹಾಗೂ ರಥ ನಿರ್ಮಾಣ ಕಾರ್ಯವು ನಡೆಯುತ್ತಿದ್ದು ರಥ ನಿರ್ಮಾಣಕ್ಕೆ ಸಾಗುವಾನಿ ಮರದ ಅವಶ್ಯಕತೆ ಇದ್ದು ಭಕ್ತಾದಿಗಳು ಮರವನ್ನು ಪೂರೈಸುವಂತೆ ದೇವಸ್ಥಾನದ ವತಿಯಿಂದ ವಿನಂತಿಸಲಾಗಿದೆ.


ಕಾಷ್ಟ ಶಿಲ್ಪಿಗೆ ಜೂ.05 ರಂದು ವೀಳ್ಯ ಮುಹೂರ್ತ ನಡೆದ ಬಳಿಕ
ದೇವಸ್ಥಾನದ ಮುಂಭಾಗದಲ್ಲಿ ಮರದ ಕೆತ್ತನೆ ಕೆಲಸ ನಡೆಯುತ್ತಿದೆ.
ಕಾಷ್ಟ ಶಿಲ್ಪಿಗಳಾದ ಹರೀಶ್ ಆಚಾರ್ಯ ಬೊಲಿಯಾರುರವರ ನೇತೃತ್ವದಲ್ಲಿ ಸಂತೋಷ್ ಆಚಾರ್ಯ, ಬಾಲಕೃಷ್ಣ ಆಚಾರ್ಯ ಮತ್ತಿತರರು ಮರದ ಕೆತ್ತನೆ ಕೆಲಸ ಮಾಡುತ್ತಿದ್ದಾರೆ.ಸಾಗುವಾನಿ ಹಾಗೂ ಕೀಲಾರ್ ಬೋಗಿ ಮರದಿಂದ ರಥ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕೆತ್ತನೆ ಕೆಲಸಕ್ಕೆ ಸಾಗುವಾನಿ ಮರ ಕಮ್ಮಿಯಾಗಿದ್ದು ಸಾಗುವಾನಿ ಮರ ಬೇಕಾಗಿದೆ.


ಭಕ್ತಾದಿಗಳು ಸಾಗುವಾನಿ ಮರ ಹಾಗೂ ಧನ ಸಹಾಯವನ್ನು ರಥ ನಿರ್ಮಾಣ ಕಾರ್ಯಕ್ಕೆ ನೀಡಿ ,ದೇವಸ್ಥಾನದಲ್ಲಿ ನಡೆಯುವ ಮಹತ್ಕಾರ್ಯವನ್ನು ವಿಧಿವತ್ತಾಗಿ ನಡೆಯಲು ಸಹಕರಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.