ಚಂದನ್ ಎಸ್ ಅರಂಬೂರು ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ

0

ಮಂಗಳೂರಿನ ಪ್ರತಿಷ್ಠಿತ ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯದಲ್ಲಿ 2022-23 ಶೈಕ್ಷಣಿಕ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಚಂದನ್ ಎಸ್.ಅರಂಬೂರುರವರು ಅತ್ಯುನ್ನತ ಶ್ರೇಣಿ (9.67 SGPA) ಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಸ್ತುತ ಮಣಿಪಾಲ್ ಟೆಕ್ನಾಲಜಿ ಲಿಮಿಟೆಡ್ ಮಣಿಪಾಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ಸ್ನೇಹ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸುಳ್ಯದ ರೋಟರಿ ಪ.ಪೂ.ಕಾಲೇಜಿನಲ್ಲಿ ಪೂರೈಸಿರುತ್ತಾರೆ
ಚಂದನ್ ರವರು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅರಂಬೂರಿನ ದಿ. ಶೇಷು ನಾಯ್ಕ ಮತ್ತು ದಿ. ಶ್ರೀಮತಿ ರತ್ನಾವತಿ ಯವರ ಮೊಮ್ಮಗ , ಸತೀಶ್ ಎಸ್.- ಶ್ರೀಮತಿ ಸವಿತಾ ವಿ. ದಂಪತಿಯ ಪುತ್ರ.