ಗುತ್ತಿಗಾರು ಪ್ರೌಢಶಾಲಾ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿ ಕೇಶವ ಗೌಡ ಕಾಂತಿಲ

0

ಗುತ್ತಿಗಾರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 2023- 24 ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿ ಕೇಶವ ಗೌಡ ಕಾಂತಿಲ ಅವರನ್ನು ಆಯ್ಕೆಮಾಡಲಾಗಿದೆ.

ಸದಸ್ಯರುಗಳಾಗಿ ಗಂಗಾಧರ ಚಿಕ್ಕುಳಿ, ಪ್ರಸಾದ್ ಎರ್ಮೆಟ್ಟಿ, ಸುಬ್ಬಪ್ಪ ಸಾಲ್ತಾಡಿ, ಸುಧೀರ್ ಅಮೆ ಮನೆ, ವಿಶ್ವನಾಥ ಮೆಟ್ಟಿನಡ್ಕ, ಶ್ರೀಮತಿ ಲಲಿತಾ ಕಮಿಲ, ಶ್ರೀಮತಿ ಪ್ರಸೀತಾ ಕಡಪಾಲ ಮತ್ತು ಶ್ರೀಮತಿ ಸುಮಯಾ ಇವರು ಆಯ್ಕೆಗೊಂಡಿರುತ್ತಾರೆ.

ಕಳೆದ ಎರಡು ಅವಧಿಯಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದ ಲೋಕೇಶ್ವರ ಡಿ ಆರ್ ಅವರು ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಈ ಹಿಂದಿನ ಸಾಲಿನಲ್ಲಿ ಶಾಲಾಭಿವೃದ್ದಿ ಸಮಿತಿಯಿಂದ ಆದ ಅಭಿವೃದ್ಧಿ ಕೆಲಸಗಳನ್ನು ಹಾಗೂ ಶಾಲಾ ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಶ್ಲಾಘಿಸಲಾಯಿತು.