ಕೋಲ್ಚಾರು ರಸ್ತೆಯ ಬದಿಯಲ್ಲಿ ಇರುವ ಸುಮಾರು 40 ರಷ್ಟು ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸದಂತೆ ಕಾರ್ಯ ಪ್ರವೃತ್ತರಾಗಬೇಕೆಂದು ಸುಳ್ಯ ತಹಶಿಲ್ದಾರವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ವಿಪರೀತಮಳೆ ಸುರಿಯುತ್ತಿರುವುದರಿಂದ ರಸ್ತೆಯ ಬದಿಯಲ್ಲಿ ಮರ ಹಾಗೂ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಾಕಷ್ಟು ಮರಗಳು ರಸ್ತೆ ಮೇಲೆ ವಾಲಿಕೊಂಡಿದ್ದು ಬೀಳುವ ಸಾಧ್ಯತೆ ಇದ್ದು ಹಾನಿ ಸಂಭವಿಸುವ ಮೊದಲು
ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಇಲಾಖೆಗೆ ಮರಗಳ ತೆರವಿಗೆ ಸೂಚಿಸಬೇಕಂಬುದಾಗಿ ಯುವ ನ್ಯಾಯವಾದಿ ಸತೀಶ್ ಕುಂಭಕೋಡು ಮನವಿ ಸಲ್ಲಿಸಿರುತ್ತಾರೆ.