ಹರಿಹರ ಪಲ್ಲತಡ್ಕ: ಗುಂಡಡ್ಕ ಸೇತುವೆ ಮುಳುಗಡೆ

0

ರಸ್ತೆಗೆ ಬರೆ ಜರಿದು, ಬಂಡೆ ಬಿದ್ದು ಸಂಚಾರ ಬಂದ್

ಹರಿಹರ ಪಲ್ಲತಡ್ಕ – ಐನೆಕಿದು- ಮಲೆಯಾಳ ಸಂಪರ್ಕ ಸ್ಥಗಿತ

ಹರಿಹರ ಪಲ್ಲತಡ್ಕದ ಬಳಿಯ ಗುಂಡಡ್ಕ ಸೇತುವೆ ಮುಳುಗಡೆ ಹಾಗೂ ರಸ್ತೆಗೆ ಬಂಡೆ ಬಿದ್ದು, ಬರೆ ಜರಿದು ರಸ್ತೆ ಸಂಚಾರವು ಸ್ಥಗಿತಗೊಂಡಿದೆ.

ದೇವರ ಗದ್ದೆ ಎಂಬಲ್ಲಿ ರಸ್ತೆಗೆ
ಮಣ್ಣು ಕುಸಿದಿದೆ, ದೇವರಗದ್ದೆ ಎಂಬಲ್ಲಿ ಬಂಡೆ ಬಿದ್ದಿದ್ದು, ವಿದ್ಯುತ್ ಕಂಬವು ಬಿದ್ದ ಘಟನೆ ಇಂದು ಸಂಜೆ ವರದಿಯಾಗಿದೆ. ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಮಳೆಯಾಗುತಿದ್ದು ಗುಂಡಡ್ಕ ಸೇತುವೆ ಬಹುತೇಕ ಕಾಲ ಮುಳುಗಿದ್ದು ಇಂದು ಸಂಜೆ ಮತ್ತೆ ನೀರಿನ ಮಟ್ಟ ಏರಿದೆ.

ಈ ಎಲ್ಲಾ ಘಟನೆಗಳಿಂದ ಹರಿಹರ ಪಲ್ಲತಡ್ಕ – ಐನೆಕಿದು – ಮಲೆಯಾಳ ರಸ್ತೆ ಸಂಚಾರವು ಸ್ಥಗಿತವಾಗಿದೆ ಎಂದು ತಿಳಿದು ಬಂದಿದೆ.