ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆಯ ನೀರಬಿದಿರೆ ಎಂಬಲ್ಲಿ ರಸ್ತೆ ಕೆಸರುಮಯವಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ಈ ಸ್ಥಳದಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕಾಗಿ ಮೊದಲಿದ್ದ ಡಾಮರನ್ನು ತೆಗೆಯಲಾಗಿತ್ತು. ರಸ್ತೆಯನ್ನು ಕಾಂಕ್ರೀಟೀಕರಣಕ್ಕಾಗಿ ಆಳ ಮಾಡಿರುವುದರಿಂದ ಅದೇ ಸ್ಥಳದಲ್ಲಿ ನೀರಿನ ವಸರು ಏಳುವುದರಿಂದ, ರಸ್ತೆಯ ನೀರು ಹೋಗಲು ಕಣಿಯ ವ್ಯವಸ್ಥೆಯನ್ನು ಕೂಡ ಮಾಡದೇ ಇರುವುದರಿಂದ ಮತ್ತಷ್ಟು ಕೆಸರುಮಯವಾಗಿದೆ.
ಈ ರಸ್ತೆಯಲ್ಲಿ ಖಾಸಗಿ ಬಸ್ಸು, ಸ್ಕೂಲ್ ವ್ಯಾನ್ ಕೂಡ ಸಂಚರಿಸುವುದರಿಂದ ತೊಂದರೆಯಾಗಿದೆ. ಸ್ಥಳೀಯ ನ.ಪಂ.ಆಡಳಿತ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಬೇಕಾಗಿದೆ.