ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯ ಹಳೆಗೇಟು ಬಳಿ ಪಯಶ್ವಿನಿ ನದಿಗೆ ಸೇರುವ ಬ್ರಹ್ಮರಗಯ ಹೊಳೆಯ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡು ಬಂದಿದೆ.
ಸುಳ್ಯ ಮೊಗರ್ಪಣೆಯ ಸೇತುವೆಯ ಬಳಿಯ ಪಕ್ಕದಲ್ಲಿರುವ ಮನೆಗಳ ಸಮೀಪ ನೀರು ಬರುವ ಮುನ್ಸೂಚನೆ ನೀಡುತ್ತಿದ್ದು ಬ್ರಹ್ಮರಗಯಾ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿ ರಸ್ತೆಯ ಮಟ್ಟದಲ್ಲಿ ಹೊಳೆಯ ನೀರು ಹರಿಯುತ್ತಿದೆ.
ಇದೇ ರೀತಿ ಇಂದು ರಾತ್ರಿ ಸಮಯದಲ್ಲಿ ಮಳೆ ಬಂದರೆ ಹೊಳೆನೀರು ರಸ್ತೆಯನ್ನು ಆಕ್ರಮಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಆದ್ದರಿಂದ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ತಮ್ಮ ವಾಹನವನ್ನು ಚಲಾಯಿಸಬೇಕಾಗಿದೆ.