ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ ಒಂದು ವರ್ಷ

0

ದಿ.ಪ್ರವೀಣ್ ಪುತ್ಥಳಿಗೆ ಶಾಸಕರಿಂದ ಮಾಲಾರ್ಪಣೆ

ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು ಮನೆ ಸಮೀಪದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಜು.26 ರಂದು ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದಿ.ಪ್ರವೀಣ್ ನೆಟ್ಟಾರು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


ಪ್ರವೀಣ್ ತಂದೆ ಶೇಖರ ಪೂಜಾರಿಯವರು ದೀಪ ಬೆಳಗಿಸಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ ಪ್ರವೀಣ್ ನೆಟ್ಟಾರುರವರು ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿ ಇಂದಿಗೆ ಒಂದು ವರ್ಷವಾಯಿತು.
ಹಲವು ಜನ ಹಂತಕರ ಬಂಧನವಾಗಿದೆ.


ಪ್ರಮುಖ ನಾಲ್ಕು ಜನರ ಆರೋಪಿಗಳ ಬಂಧನ ಆಗಬೇಕಷ್ಟೆ.ಎನ್.ಐ.ಯ ಅವರನ್ನು ಬಂದಿಸುತ್ತದೆ.
ತಲೆಮರೆಸಿಕೊಂಡಿರುವವರ ಮನೆಯಲ್ಲಿ ಪೋಸ್ಟರ್ ಅಂಟಿಸಲಾಗಿದೆ.ಇವರ ಬಂಧನ ಕೂಡಲೇ ಆಗಬೇಕು ಎಂದು ಹೇಳಿದರು.
ಬಳಿಕ ಆಗಮಿಸಿದ ಗಣ್ಯರು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್,ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಶ್ರೀನಾಥ್ ರೈ ಬಾಳಿಲ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಜಿಲ್ಲಾ ಯುವಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಮಹೇಶ್ ಶೆಟ್ಟಿ, ಮೇನಾಲ, ವಸಂತ ನಡುಬೈಲು, ಸಚಿನ್ ಪೂವಾಜೆ, ಪ್ರವೀಣ್ ಪತ್ನಿ ಶ್ರೀಮತಿ ನೂತನ ಪ್ರವೀಣ್, ತಾಯಿ ರತ್ನಾವತಿ ಹಾಗೂ ಕುಟುಂಬಸ್ಥರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.