ಸುಳ್ಯ ರೋಟರಿ ಕ್ಲಬ್ ಮತ್ತು ಜಂಟಿ ಸಂಘಗಳಿಂದ ಆಟಿ‌ ಆಚರಣೆ ಹಾಗೂ ಕಾರ್ಗಿಲ್ ದಿನಾಚರಣೆ

0

ಸುಳ್ಯ ರೋಟರಿ ಕ್ಲಬ್, ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ಇನ್ನರ್ವಿಲ್ ಕ್ಲಬ್ ಸುಳ್ಯ ಇವುಗಳ ಆಶ್ರಯದಲ್ಲಿ ಜು.26 ರಂದು ಆಟಿ ಆಚರಣೆ ಹಾಗೂ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.

ಆಟಿಯ ಕುರಿತಾಗಿ ಅನಂದಿತ ಗೌಡ ಕೊಚ್ಚಿ ಇವರು ಮಾತನಾಡಿದರು. ಕಾರ್ಗಿಲ್ ವಿಜಯೋತ್ಸವದ ಸಂಕೇತವಾಗಿ ಕಾರ್ಗಿಲ್ ಯೋಧ ಸಂಜೀವ ಗೌಡ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುಳ್ಯ ರೋಟರಿ ಕ್ಲಬ್ ಆನಂದ ಖಂಡಿಗ, , ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡು, ಜಂಟಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯದಾಗಿ ಇನ್ನರ್ ವೀಲ್ ಸದಸ್ಯರು ತಯಾರಿಸಿದ್ದ ಆಟಿಯ ವಿಶೇಷ ಖಾದ್ಯಗಳನ್ನು ಉಣಬಡಿಸಲಾಯಿತು