ಸುಬ್ರಹ್ಮಣ್ಯ: ಬಿ ಯಂ ಎಸ್ ಸಂಸ್ಥಾಪನಾ ದಿನಾಚರಣೆ

0

ಆಟೋ ರಿಕ್ಷಾ ಚಾಲಕರ ಸಂಘ ಬಿ ಯಂ ಎಸ್ ಘಟಕ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಬಿ ಯಂ ಎಸ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು.

ಈ ಸಂದರ್ಭ ಭಾರತೀಯ ಮಜ್ದೂರು ಸಂಘದ ಸಂಸ್ಥಾಪಕಾದ ಶ್ರೀ ಎಂ.ಬಾಲಗಂಗಾಧರ ತಿಲಕರ ಕಾರ್ಮಿಕ ಸಂಘಟನೆಯ ಧ್ಯೇಯೋದ್ದೇಶಗಳನ್ನು ನೆನಪಿಸಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಬಿ ಯಂ ಎಸ್ ಘಟಕ ಸುಬ್ರಹ್ಮಣ್ಯ ಇದರ ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಿಹಿ ತಿಂಡಿ ವಿತರಿಸಲಾಯಿತು.