ಮೆಟ್ಟಿನಡ್ಕ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ನಿರ್ದೇಶಕರುಗಳ ಆಯ್ಕೆ

0

ಮೆಟ್ಟಿನಡ್ಕ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘ ಇದರ ಆಯ್ಕೆ ನಡೆದಿದ್ದು 13 ನಿರ್ದೇಶಕರುಗಳ ಪೈಕಿ 11 ನಿರ್ದೇಶಕರುಗಳ ಆಯ್ಕೆ ನಡೆದಿದೆ.

ಜು.29 ರಂದು ನಡೆಯಬೇಕಿದ್ದ ಚುನಾವಣೆಗೆ 13 ಮಂದಿ ನಾಮಪತ್ರ ಸಲ್ಲಿಸಿದ್ದು ಇಬ್ಬರು ಹಿಂತೆಗೆದುಕೊಂಡಿದ್ದರು. 11 ಮಂದಿ ಕಣದಲ್ಲಿ ಉಳಿದಿದ್ದು ಅವರೆಲ್ಲಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸ್ಥಾನದಿಂದ ಯಶೋದಾ ಬಾಳೆಗುಡ್ಡೆ, ಮೀನಾಕ್ಷಿ ಮಾಡಬಾಕಿಲು, ಚಿನ್ನಮ್ಮ ಸಾಲ್ತಾಡಿ, ಕುಸುಮಾವತಿ ಸಾಲ್ತಾಡಿ, ಪ್ರೇಮ ಎಂ.ಎಚ್ ಮುಂಡೋಡಿ, ಸುಜನ್ಯ ರದ್ರಚಾಮುಂಡಿ, ಮಂಜುಳಾ ಪಿಳಿಂಗ, ಮೋಹಿನಿ ಮೀನಾಜೆ, ಲಕ್ಷ್ಮೀ . ಯು ಹೊಸಮನೆ ಅವರಿಗಳಿದ್ದು ಪರಿಶಿಷ್ಟ ಪಂಗಡ ದಿಂದ ಲಕ್ಷ್ಮೀ ಸಿ.ಎಚ್, ಹಿಂದುಳಿದ ವರ್ಗದಿಂದ ಅನಿತಾ ಮೆಟ್ಟಿನಡ್ಕ ಆಯ್ಕೆ ನಡೆದಿದೆ. ಚಂದ್ರಾವತಿ ಎಂ.ಎಚ್, ಮೀನಾಕ್ಷಿ ಕೆ.ಟಿ ನಾಮಪತ್ರ ಸಲ್ಲಿಸಿ ಹಿಂತೆಗೆದುಕೊಂಡವರು. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ತಲಾ ಒಂದು ನಿರ್ದೇಶಕ ಸ್ಥಾನ ಅಭ್ಯರ್ಥಿಗಳಿಲ್ಲದೆ ಭರ್ತಿಯಾಗಿಲ್ಲ. ಕಾರ್ಯದರ್ಶಿಯಾಗಿ ಹೇಮಾವತಿ ಕಾರ್ಯನಿರ್ವಹಿಸುತಿದ್ದಾರೆ.