ಅಪಾಯದಲ್ಲಿರುವ ಕೊಲ್ಲಮೊಗ್ರು- ಹರಿಹರ ಪಲ್ಲತಡ್ಕ ಸಹಕಾರ ಸಂಘದ ಕಟ್ಟಡ
ಹರಿಹರ ಪಲ್ಲತಡ್ಕದದಲ್ಲಿ ಪೇಟೆಯ ಬಳಿ ಬರೆ ಕುಸಿದು ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಸಹಕಾರ ಸಂಘದ ಪ್ರಧಾನ ಕಛೇರಿ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ.
ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಜು.೨೪ ರಂದು ಹರಿಹರ ಪಲ್ಲತಡ್ಕ ಪೇಟೆಯ ಬಳಿ ತೇಜಕುಮಾರ್ ಕಜ್ಜೋಡಿ ಮತ್ತು ಸೀತಾರಾಮ ಅವರಿಗೆ ಸೇರಿದ ಜಾಗದ ಬಳಿ ಸುಮಾರು ೪೦ ಅಡಿ ಎತ್ತರದಿಂದ ಲೋಡುಗಟ್ಟಳೆ ಕಲ್ಲು, ಮಣ್ಣು ಕುಸಿದು ಬಿದ್ದಿದೆ. ಪರಿಣಾಮ ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಸಹಕಾರ ಸಂಘದ ಪ್ರಧಾನ ಕಛೇರಿಯ ಒಂದು ಒಂದು ಬದಿಗೆ ಅಪಾಯ ಉಂಟಾಗಿದೆ.
ಇನ್ನಷ್ಟು ಮಳೆ ಬಂದರೆ ಅಪಾಯ ಗ್ಯಾರಂಟಿ. ಈ ಸಂಭಾವ್ಯ ಅಪಾಯ ತಪ್ಪಿಸಬೇಕಾದಲ್ಲಿ ಇಲ್ಲಿಗೆ ಶಾಶ್ವತ ತಡೆಗೋಡೆಯ ಅನಿವಾರ್ಯತೆ ಇದೆ. ಇದಕ್ಕೆಲ್ಲಾ ದೊಡ್ಡ ಮೊತ್ತದ ಅನುದಾನದ ಅವಶ್ಯಕತೆ ಇದ್ದು ಪ್ರಕೃತಿ ವಿಕೋಪ ಅಥವಾ ಸರ್ಕಾರದ ಮತ್ಯಾವುದೇ ಅನುದಾನ ಬಳಸಿ ಇಲ್ಲಿಗೆ ಶಾಶ್ವತ ವ್ಯವಸ್ಥೆ ಆಗಬೇಕಾಗಿದ್ದು ನಾಲ್ಕು ಗ್ರಾಮಗಳಿಗೆ ಬೇಕಾದ ಸಂಸ್ಥೆಯೊಂದರ ಕಷ್ಟಕ್ಕೆ ಸರ್ಕಾರ ಕೈ ಜೋಡಿಸಬೇಕಾಗಿದೆ.