ಕೃಷಿ ಕ್ಷೇತ್ರದ ಸಾಧನೆ, ಸಮಾಜ ಸೇವಾಕಾರ್ಯಕ್ಕಾಗಿ ಏಶ್ಯಾಕಲ್ಟರಲ್ಎಂಡ್ ಸಂಶೋಧನಾ ಅಕಾಡೆಮಿಯಿಂದ ನಿವೃತ್ತಯೋಧ ಗೋಪಾಲಕೃಷ್ಣ ಕಾಂಚೋಡುರಿಗೆ ಗೌರವ ಡಾಕ್ಟರೇಟ್

0

ನಿವೃತ್ತ ಯೋಧ ಗೋಪಾಲಕೃಷ್ಣ
ಕಾಂಚೋಡುರವರ ಕೃಷಿ ಕ್ಷೇತ್ರದ ಸಾಧನೆ ಮತ್ತು ಸಮಾಜ ಸೇವಾಕಾರ್ಯವನ್ನು
ಗುರುತಿಸಿ ಏಶ್ಯಾಕಲ್ಟರಲ್ ಎಂಡ್ ಸಂಶೋಧನಾ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿದೆ. ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ಸ್ಟಾರ್ ಹೊಟೇಲ್ ಕರೆಸ್ವಾದ ಸೆಮಿನಾರ್ ಹಾಲ್‌ನಲ್ಲಿ ಜು. 29ರಂದು ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಒನ್ ಇಂಡಿಯಾ, ಗ್ರೇಟ್ ಇಂಡಿಯಾ ಸಂಸ್ಥೆಯಿಂದ ಜೈಜವಾನ್ ಜೈಕಿಸಾನ್ ಅವಾರ್ಡ್ ಪಡೆದಿರುವ ಇವರು 1980ರಿಂದ 1997ರ ತನಕ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ
ನಿವೃತ್ತಿಯ ಬಳಿಕ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸವಾಗಿರುವ ಇವರು ಮೂಲತಃ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕಾಂಚೋಡು ಕೆ.ಜಿ. ಸುಬ್ರಾಯ ಭಟ್ ಮತ್ತು ಶ್ರೀಮತಿ ಕೆ.ಎಸ್. ದೇವಮ್ಮ ದಂಪತಿಯ ಪುತ್ರ.