ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ
ಬೂಡು ಭಗವತಿ ದೇವರ ಎದುರಿನ ಕೆಸರು ಗದ್ದೆಯಲ್ಲಿ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಜು.30 ರಂದು ನಡೆಯಿತು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಬೂಡು ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಎಸ್ ನಡುಬೈಲು, ಧರ್ಮಸ್ಥಳ ಯೋಜನೆಯ ಕೇರ್ಪಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಭಟ್ ಸುಳ್ಯ, ಬಂಟರ ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪೂರ್ತಿ ರೈ ಮತ್ತು ಯುಕ್ತಿ ರೈ ಪ್ರಾರ್ಥಿಸಿದರು. ಚಂದ್ರಾಕ್ಷಿ ಜೆ.ರೈ ಸ್ವಾಗತಿಸಿದರು. ಸಂಚಾಲಕ ಜೆ.ಕೆ ರೈ ವಂದಿಸಿದರು. ಕ್ರೀಡಾಕೂಟದ ಸಂಚಾಲಕ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಕುಸುಮಾಧರ ರೈ ಸಹಕರಿಸಿದರು.
ಕೆಸರು ಗದ್ದೆಯಲ್ಲಿ ಓಟದ ಸ್ಪರ್ಧೆ , ರಿಲೇ ಓಟ ,ಹಗ್ಗ ಜಗ್ಗಾಟ, ವಾಲಿಬಾಲ್ ಪಂದ್ಯಾಟ, ಎತ್ತಿನ ಗಾಡಿ ಓಟ, ತ್ರೋಬಾಲ್ ಪಂದ್ಯಾಟ, ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಹಾಗೂ
ಯುವಕ ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಕೆಸರು ಗದ್ದೆಯಲ್ಲಿ ಆಯೋಜಿಸಲಾಯಿತು.
ಬಂಟರ ಸಂಘದ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.
ಬೂಡು ಭಗವತಿಯ ಸಾನಿಧ್ಯದಲ್ಲಿ ಇರುವ ಗದ್ದೆಯಲ್ಲಿ ಇಳಿದು ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಅತ್ಯಂತ ಸಂತಸದಾಯಕವಾಗಿದೆ-ಹರಪ್ರಸಾದ್ ತುದಿಯಡ್ಕ
ಇತಿಹಾಸದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡುವ ಕಾರ್ಯವಾಗಿದೆ- ವೀರಪ್ಪ ಗೌಡ ಕಣ್ಕಲ್
ಕೆಸರುಗದ್ದೆಯಲ್ಲಿ ಕಳೆಯುವುದರಿಂದ ಆರೋಗ್ಯವರ್ಧಕ ಅಂಶಗಳು ನಮಗೆ ಸಿಗುವುದು- ಗೋಪಾಲ ನಡುಬೈಲು
ಅಪರೂಪದ ಕೆಸರು ಗದ್ದೆ ಕ್ರೀಡಾಕೂಟ ಬೂಡು ಪರಿಸರದಲ್ಲಿ ನಡೆಯುತ್ತಿರುವುದು ಶ್ಲಾಘನೀಯ- ಪ್ರಶಾಂತ್ ಭಟ್
ಇಂತಹ ಕ್ರೀಡಾಕೂಟ ಕೆಸರು ಗದ್ದೆಯಲ್ಲಿ ನಡೆಸುವುದರಿಂದ ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ನೀಡಿದಂತಾಗುವುದು- ಆನಂದ ಗೌಡ ಖಂಡಿಗ
ಆಷಾಢ ಮಾಸದಲ್ಲಿ ಹಿಂದಿನ ಕಾಲದಲ್ಲಿ ಹಿರಿಯರು ಪಡುತ್ತಿದ್ದ ಕಷ್ಟದ ದಿನಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದ ಪದ್ಧತಿಯನ್ನು ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮದ ಮೂಲಕ ತಿಳಿಸುವ ಉದ್ದೇಶ ಹೊಂದಿದೆ -ಜಯಪ್ರಕಾಶ್ ರೈ