ಮುಚ್ಚಿಲದಲ್ಲಿ ಮಹಿಳೆಯೋರ್ವರು ತನ್ನ ಪತಿ ಹಾಗೂ ಮನೆಯವರು ದೈಹಿಕ ,ಮಾನಸಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ದೂರು ನೀಡಿದ ಘಟನೆ ಜು. 27 ರಂದು ನಡೆದಿದೆ.
ಕಲ್ಮಡ್ಕ ಗ್ರಾಮದ ಮುಚ್ಚಿಲ ಆಯಿಷಾ ಎಂಬವರನ್ನು ಮಡಿಕೇರಿಯ ತೌಫೀಕ್ ಎಂಬವರಿಗೆ ಮದುವೆ ಮಾಡಿ ಕೊಟ್ಟಿದ್ದು ಅಲ್ಲಿ ಗಂಡನು ಅಮಲು ಪದಾರ್ಥ ಸೇವಿಸಿಕೊಂಡು ಬಂದು ವಿನಾಕಾರಣ ಸಂಶಯ ಪಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ,ಹಲ್ಲೆ ನಡೆಸಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ.
ಅತ್ತೆ ಮೈಮುನಾ,ಗಂಡನ ಅಕ್ಕ ಫರ್ಝಾನ,ಗಂಡನ ತಮ್ಮ ತೌಸೀಫ್ ,ಹಾಗೂ ತೌಸಿಫ್ ನ ಪತ್ನಿ ನಸ್ರೀನಾ ಇವರು ನನ್ನ ನಡತೆ ಸರಿ ಇಲ್ಲ ಎಂಬುದಾಗಿ ಆರೋಪಿಸಿ ಗಂಡನ ಪರವಾಗಿ ನಿಂತು ಕಿರುಕುಳ ನೀಡುತ್ತಾರೆ ಎಂದು ಪೊಲೀಸು ದೂರು ನೀಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ತೌಫಿಕ್ ಎಂ.ಎಂ., ಮೈಮುನಾ,ಫರ್ಝಾನ,ತೌಸೀಫ್,ನಸ್ರೀನಾ ರವರ ಮೇಲೆ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.