ಅಮರಮುಡ್ನೂರು ಶಾಲೆಯಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ – ಸನ್ಮಾನ

0

ಅಮರಮುಡ್ನೂರು ಸ.ಹಿ.ಪ್ರಾ.ಶಾಲೆಯಲ್ಲಿ ಮೆಂಡಾ ಫೌಂಡೇಶನ್ ಮತ್ತು ಎಸ್.ಪಿ. ಗ್ಲೋಬಲ್ ಫೌಂಡೇಶನ್ ಪ್ರಾಯೋಜಕತ್ವ ದೊಂದಿಗೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿಮಿಟೆಡ್ ಸಹಯೋಗದೊಂದಿಗೆ ಸಮರ್ಪನಾ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಆವಿಷ್ಕಾರ ಮಾಡಲಾಗಿದ್ದು ಇದರ ಉದ್ಘಾಟನೆ ಆ.1 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷರಾದ ಪದ್ಮಪ್ರಿಯಾ ಮೇಲ್ತೋಟ ವಹಿಸಿದ್ದರು. ಶಾಸಕಿ‌ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ., ಜಿ.ಪಂ. ಮಾಜಿ ಸದಸ್ಯ ಎಸ್.ಎನ್.ಮನ್ಮಥ, ಗ್ರಾ.ಪಂ. ಸದಸ್ಯರುಗಳಾದ ಭುವನೇಶ್ವರಿ ಹಾಗೂ ರಾಧಾಕೃಷ್ಣ ಕೊರತ್ಯಡ್ಕ, ಸೀತಾ‌ ಹೆಚ್, ಸೆಲ್ಕೋ ಕ್ಷೇತ್ರ ವ್ಯವಸ್ಥಾಪಕರಾದ ಪ್ರಸಾದ್, ಸಮರ್ಪನಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕಿ ಪಾರ್ವತಿ, ನೇಣಾರು, ಎಸ್.ಡಿ.ಎಂ.ಸಿ. ಅಧ್ಯಕ್ಷ ಈಶ್ವರ ಕಾಯರ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೂಪವಾಣಿ ಇದ್ದರು.

ಸಮಾರಂಭದಲ್ಲಿ ಶಾಸಕಿ‌ ಭಾಗೀರಥಿ ಮುರುಳ್ಯ, ಸೆಲ್ಕೊ ಸಂಸ್ಥೆಯ ಸುಳ್ಯ ಶಾಖೆ ವ್ಯವಸ್ಥಾಪಕ ಆಶಿಕ್ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕಿ ಪಾರ್ವತಿ ನೇಣಾರುರನ್ನು ಸನ್ಮಾನಿಸಲಾಯಿತು.

ಶಿಕ್ಷಕ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.