ಕೇನ್ಯ:ಪ್ರಭಾರ ಮುಖ್ಯ ಶಿಕ್ಷಕಿ ರೇವತಿ ಯವರಿಗೆ ವರ್ಗಾವಣೆ-ಬೀಳ್ಕೊಡುಗೆ

0

ಕಳೆದ ಸುಮಾರು 16 ವರ್ಷಗಳಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇನ್ಯದಲ್ಲಿ ಶಿಕ್ಷಕಿಯಾಗಿ, ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ,ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಕು. ರೇವತಿ ರವರಿಗೆ ಉಡುಪಿ ಜಿಲ್ಲೆಯ ಹೆಮ್ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಗಿದ್ದು,ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ, ಶ್ರೀ ದುರ್ಗಾ ಸೇವಾ ಸಂಘ, ಎಸ್. ಡಿ. ಎಂ. ಸಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಗಳ ವತಿಯಿಂದ ನಡೆಯುತ್ತಿರುವ ನಮ್ಮೂರ ಸರಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಸಂಪೂರ್ಣ ಸಹಕಾರವನ್ನು ನೀಡಿ ಕೇನ್ಯ ಶಾಲೆಯ ಅಭಿವೃದ್ಧಿಗೂ ಕೈ ಜೋಡಿಸಿ ಊರವರ ಗೌರವಕ್ಕೆ ಪಾತ್ರರಾಗಿದ್ದರು.


ಜು.27 ರಂದು ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ವತಿಯಿಂದ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶ್ರೀ ದುರ್ಗಾ ಸೇವಾ ಸಂಘದ ವತಿಯಿಂದ ಕು. ರೇವತಿ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು ಶಿಕ್ಷಕಿ ರೇವತಿ ಯವರಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುಟ್ಟಣ್ಣ ಗೌಡ ಕುಂಜತ್ತಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಾನಂದ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್ ರೈ ಕೇನ್ಯ, ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತಾರಾ ಬಿ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಕಟಪೂರ್ವ ಅಧ್ಯಕ್ಷರು ವಿಠ್ಠಲ ರೈ, ಕೇನ್ಯ.ಶ್ರೀ ದುರ್ಗಾ ಸೇವಾ ಸಂಘದ ಕಾರ್ಯದರ್ಶಿ ದೇವಿಪ್ರಸಾದ್ ರೈ ಗೆಜ್ಜೆ, ಪೋಷಕ ವಾಸುದೇವ ಗೌಡ ಆನೆಮನೆ,ಸೇವಾ ಪ್ರತಿನಿಧಿ ಸುಮಿತ್ರ ರವರು ಉಪಸ್ಥಿತರಿದ್ದರು.

ಪದ್ಮನಾಭ ಕೆರೆಕ್ಕೋಡಿ ಸ್ವಾಗತಿಸಿದರು.ಸಹಶಿಕ್ಷಕಿ ಶ್ರೀಮತಿ ಅಂಕಿತ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ತುಲಾಶ್ರೀ ವಂದಿಸಿದರು.