ಆ. 13 ರಂದು ಸುಳ್ಯದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ಆಟಿಡೊಂಜಿ ದಿನ

0


ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ – ಶೈಕ್ಷಣಿಕ ಸಾಧಕರಿಗೆ ಪುರಸ್ಕಾರ

ಸುಳ್ಯದ ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಟಿಡೊಂಜಿ ದಿನ ಗ್ರಾಮೀಣ ಕ್ರೀಡಾಕೂಟ ಹಾಗೂ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ ಕಾರ್ಯಕ್ರಮ ಆ.೧೩ರಂದು ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮೋನಪ್ಪ ರಾಜಾರಾಂಪುರ ಹಾಗೂ ಗೌರವಾಧ್ಯಕ್ಷ ಬಾಬು ಕೆ.ಎಂ. ಜಾಲ್ಸೂರು ಹೇಳಿದ್ದಾರೆ.


ಆ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.
ಕಳೆದ ೧೪ ವರ್ಷದಿಂದ ಸಂಘಟನೆ ಸಕ್ರಿಯವಾಗಿದ್ದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಪ್ರತೀ ವರ್ಷವು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಟೋಟ, ಸಾಂಸ್ಕ್ರತಿಕ, ಸಭಾ ಕಾರ್ಯಕ್ರಮದೊಂದಿಗೆ ಆಯೋಜಿಸಲಾಗುತ್ತಿದ್ದು ನಮ್ಮ ಸಂಸ್ಕ್ರತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಆ.೧೩ರಂದು ಸುಳ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಮಾಯಿಲಪ್ಪ ಬೂಡು ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಸ್ಪರ್ಧೆಗಳು ನಡೆಯುವುದು. ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ ಬಾಗ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮಂಗಳೂರು ವಿವಿ ಕನ್ನಡ ಉಪನ್ಯಾಸಕ ಡಾ| ಯಶುಕುಮಾರ್ ಉಪನ್ಯಾಸ ನೀಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಗುವುದು. ಅಲ್ಲದೆ ಶೈಕ್ಷಣಿಕ ಸಾಧಕ ಸಮಾಜದ ಮಕ್ಕಳನ್ನು ಪುರಸ್ಕರಿಸಲಾಗುತ್ತದೆ ಎಂದು ಅವರು ವಿವರ ನೀಡಿದರು.


ಸುಳ್ಯ ತಾಲೂಕಿನಲ್ಲಿ ಸಮಾಜದ ೧೨೦ ಕಾಲೋನಿಗಳಿದ್ದು ಸುಮಾರು ೩೬ ಮಂದಿ ಸಮಾಜ ಬಾಂಧವರಿದ್ದಾರೆ. ಎಲ್ಲರೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚನಿಯ ಕಲ್ತಡ್ಕ, ಚಂದ್ರಶೇಖರ ಐವರ್ನಾಡು, ಚೋಮ ನಾವೂರು, ವಿಜಯ ಆಲಡ್ಕ, ರಾಮಚಂದ್ರ ಕೊಯಿಲ, ಶಿವಪ್ಪ ಕೋಡ್ತಿಲು, ಕರಿಯಪ್ಪ ಕೋಡ್ತಿಲು ಉಪಸ್ಥಿತರಿದ್ದರು.