ಪಂಜ : ಯುವಕ-ಯುವತಿ ಮಂಡಲಗಳ ವತಿಯಿಂದ-ಕೆಸರ್ ದ ಪರ್ಬ-2023 ಉದ್ಘಾಟನೆ

0

🔸ದೈಹಿಕ ಮಾನಸಿಕ ಆರೋಗ್ಯಕ್ಕೆ ಕೆಸರಿನ ಕ್ರೀಡೆಗಳು ಅಗತ್ಯ-ಕುಶಾಲಪ್ಪ ಗೌಡ ದೊಡ್ಡಮನೆ

🔸ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಆಗಲಿ-ವಸಂತ ನಡುಬೈಲು

🔸 ಗದ್ದೆಯ ಮಣ್ಣಿನಲ್ಲಿ ಔಷಧಿ
ಗುಣವಿದೆ -ನೇಮಿರಾಜ ಪಲ್ಲೋಡಿ

ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಅಳ್ಪೆ-ಚಿಂಗಾಣಿಗುಡ್ಡೆ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ‘ಕೆಸರ್ ದ ಪರ್ಬ ಕ್ರೀಡಾ ಕೂಟ-2023 “ಅಳ್ಪೆ ಕುದ್ಕುಳಿ ಹಿಮಕರ ಇವರ ಗದ್ದೆಯಲ್ಲಿ ಆ.6 ರಂದು ಜರುಗಿತು.


ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಕುಶಾಲಪ್ಪ ದೊಡ್ಡಮನೆ ಉದ್ಘಾಟಿಸಿ ಮಾತನಾಡಿ
“ಇಲ್ಲಿನ ಯುವಕ ಯುವತಿ ಮಂಡಲಗಳು ಒಗ್ಗಟ್ಟಿನಿಂದ ವಿಶೇಷವಾಗಿ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಗುರುತಿಸಿ ಕೊಂಡಿದೆ. ಮರೆಯಾಗುತ್ತಿರುವ ಕೆಸರು ಗದ್ದೆ ಕ್ರೀಡೆಯನ್ನು ಮತ್ತೆ ಪರಿಚಯಿಸಿ ಬೆಳೆಸುವ ವಿಶೇಷ ಕಾರ್ಯ ಇಲ್ಲಿ ಆಗಿದೆ. ದೈಹಿಕ ಮಾನಸಿಕ ಆರೋಗ್ಯಕ್ಕೆ ಕೆಸರಿನ ಕ್ರೀಡೆಗಳು ಅಗತ್ಯ”ಎಂದು
ಶುಭ ಹಾರೈಸಿದರು.


ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಕೇಶವ ಕೋಟಿಯಡ್ಕ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮಾತನಾಡಿ
“ನಮ್ಮ ಹಿರಿಯರು ಪಾಲಿಸಿ ಕೊಂಡು ಬಂದಿರುವ ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗ ಬೇಕು.ಈ ಮೂಲಕ ನಮ್ಮ ಮುಂದಿನ ಪೀಳಿಗೆಗೆ ದಾಟಿಸುವ
ಕೆಲಸ ನಡೆಯಲಿ.” ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ ಮಾತನಾಡಿ “ಗದ್ದೆಯ ಮಣ್ಣಿನಲ್ಲಿ ಔಷಧಿ ಗುಣವಿದೆ. ಪ್ರಸ್ತುತ ಗದ್ದೆ ಬೇಸಾಯ ಮರೆಯಾಗುತ್ತಿದ್ದು, ಕೆಲವು ಚಿಕಿತ್ಸೆಗಳಿಗೆ ಪ್ರಕೃತಿ ಚಿಕಿತ್ಸಾಲಯಗಳಿಗೆ ಹೋಗುವಂತಾಗಿದೆ.” ಎಂದು ಅವರು ಹೇಳಿದರು
ಮೈಸೂರು ಎನ್ ಆರ್ ಗ್ರೂಪ್ ನ ಪರ್ಚೆಸ್ ಅಸಿಸ್ಟೆಂಟ್ ಜನರಲ್ ಮೆನೇಜರ್, ಸ್ಥಳ ದಾನಿ ಹಿಮಕರ ಕುದ್ಕುಳಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಪುರಿಯ, ಶ್ರೀಮತಿ ದಿವ್ಯಾ
ಪುಂಡಿಮನೆ, ಶ್ರೀಮತಿ ವೀಣಾ ಪಂಜ,ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ವನಿತಾ ಕರಿಮಜಲು , ಕಾರ್ಯಕ್ರಮ ಸಂಯೋಜಕ ವಿದ್ಯಾನಂದ ಮೇಲ್ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸುಶ್ಮಿತಾ ಶೀರಾಜೆ
ರಚಿಸಿದ ವರ್ಣಚಿತ್ರವನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು.


ಕಾರ್ಯಕ್ರಮದಲ್ಲಿ ಜಯರಾಮ ಕೋಟಿಯಡ್ಕ ಪ್ರಾರ್ಥಿಸಿದರು.ಪ್ರಕಾಶ್ ಅಳ್ಪೆ ವೇದಿಕೆಗೆ ಆಹ್ವಾನಿಸಿದರು.
ವಿದ್ಯಾನಂದ ಮೇಲ್ಮನೆ ಸ್ವಾಗತಿಸಿದರು. ಗುರುಪ್ರಸಾದ್ ತೋಟ ಪ್ರಾಸ್ತಾವಿಕಗೈದರು.
ಶರತ್ ಕೋಡಿ ವರ್ಣಚಿತ್ರ ಕುರಿತು
ಪರಿಚಯಿಸಿದರು.ಕೌಶಿಕ್ ಕುಳ ನಿರೂಪಿಸಿದರು. ಶ್ರೀಮತಿ ವನಿತಾ ಕರಿಮಜಲು ವಂದಿಸಿದರು.ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.