ಅಮರಮುಡ್ನೂರು ಪಂಚಾಯತ್ ಗ್ರಾಮ ಸಭೆ

0

ಅಜ್ಜನಗದ್ದೆ ಪೈಲಾರು ಜಬಳೆ ರಸ್ತೆ ಡಾಮರೀಕರಣ ಕಳಪೆ ಕಾಮಗಾರಿ – ಬಿಲ್ ತಡೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಅಮರಮುಡ್ನೂರು ಗ್ರಾಮ ಪಂಚಾಯತ್ ಇದರ 2022-23 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯಾ ಮೇಲ್ತೋಟ ರವರ ಅಧ್ಯಕ್ಷತೆಯಲ್ಲಿ
ಆ.7 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜ ವರದಿ ಮಂಡಿಸಿದರು.
ನೊಡೆಲ್ ಅಧಿಕಾರಿಯಾಗಿ ಬಿ.ಐ.ಬಿ.ಆರ್.ಟಿ.ಬಿ.ಆರ್.ಸಿ ದೇವರಾಜ್ ಮುತ್ಲಾಜೆ ಸಭೆಯ ಕಲಾಪ ನಡೆಸಿದರು.

ಅಡಿಕೆ ತೋಟಕ್ಕೆ ಬಾಧಿಸಿದ ಹಳದಿ ರೋಗದ ಕುರಿತು ತೋಟಗಾರಿಕೆ ಇಲಾಖೆಯ ವತಿಯಿಂದ ವಿಜ್ಞಾನಿಗಳು ಬಂದು ಗ್ರಾಮದಲ್ಲಿ ಸಮೀಕ್ಷೆ ನಡೆಸಬೇಕು. ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗದಿಂದ ಸಂಕಷ್ಟಕ್ಕೊಳಗಾದ ರೈತರ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಪತ್ರ ಬರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಅಜ್ಜನಗದ್ದೆ ಪೈಲಾರು ಜಬಳೆ ರಸ್ತೆ ಡಾಮರೀಕರಣ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಿರ್ವಹಿಸಲಾಗಿದೆ.
ಇದರ ಬಗ್ಗೆ ಇಂಜಿನಿಯರ್ ರವರನ್ನು ಕರೆಸಿ ಪರಿಶೀಲಿಸಿ ಸಮರ್ಪಕ ಕಾಮಗಾರಿ ನಡೆಸಬೇಕು. ಕಾಮಗಾರಿ ಕೆಲಸ ನಡೆದು ಕೇವಲ 6 ತಿಂಗಳು ಮುಗಿಯುವಷ್ಟರಲ್ಲಿ ಡಾಮರು ಕಿತ್ತು ಹೋಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಯನ್ನು ತಡೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಾರದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.


ವಿವಿಧ ಇಲಾಖೆಯ ಅಧಿಕಾರಿಗಳು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪಿ.ಡಿ.ಒ ದಯಾನಂದ ಪತ್ತುಕುಂಜ, ಸದಸ್ಯರಾದ ಅಶೋಕ್ ಚೂಂತಾರು, ಜಯಪ್ರಕಾಶ್ ದೊಡ್ಡಿಹಿತ್ಲು, ರಾಧಾಕೃಷ್ಣ ಕೊರತ್ಯಡ್ಕ, ಕೃಷ್ಣ ಪ್ರಸಾದ್ ಮಾಡಬಾಕಿಲು, ಜನಾರ್ದನ ಪೈಲೂರು, ವೆಂಕಟ್ರಮಣ ಇಟ್ಟಿಗುಂಡಿ, ಹೂವಪ್ಪ ಗೌಡ ಆರ್ನೋಜಿ, ದಿವಾಕರ ಪೈಲಾರು, ಜಾನಕಿ, ದಿವ್ಯ ಮಡಪ್ಪಾಡಿ, ಮೀನಾಕ್ಷಿ ಚೂಂತಾರು, ಯಮುನಾ ಬಿ, ಸೀತಾ ಹೆಚ್, ತೇಜಾವತಿ ಕುಂಟಿಕಾನ, ಭುವನೇಶ್ವರಿ ಪದವು, ಗ್ರಾಮ ಲೆಕ್ಕಾಧಿಕಾರಿ ಸೃಜನ್ ,ಶಿವಕುಮಾರ್ ಉಪಸ್ಥಿತರಿದ್ದರು.


ಪಿ.ಡಿ.ಒ ದಯಾನಂದ ಪತ್ತುಕುಂಜ ಸ್ವಾಗತಿಸಿ ,ವಂದಿಸಿದರು. ಆರೋಗ್ಯ ಸಹಾಯಕಿಯರು,
ಆಶಾ ಕಾರ್ಯಕರ್ತೆ ಯರು,ಅಂಗನವಾಡಿ ಸಹಾಯಕಿಯರು, ಶಾಲೆಯ ಶಿಕ್ಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮದ ನಾಗರಿಕರು ಭಾಗವಹಿಸಿದರು. ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.