ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ಥಾಪಕಾಧ್ಯಕ್ಷರಾದ ಡಾ||ಕುರುಂಜಿ ವೆಂಕಟ್ರಮಣಗೌಡರ ೧೦ನೇ ವರ್ಷದ ಭಾವಪೂರ್ಣ ಪುಣ್ಯಸ್ಮರಣೆ ನಡೆಯಿತು.
ಕಾಲೇಜಿನ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಡಾ. ಉಜ್ವಲ್‌ಯು.ಜೆ, ಪ್ರಾಂಶುಪಾಲೆ ಡಾ| ಮೋಕ್ಷಾ ನಾಯಕ್, ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಭಾವಚಿತ್ರಕ್ಕೆ ಹೂ ಹಾರ ಹಾಕಿ ನಮಿಸಿ, ಪುಣ್ಯಸ್ಮರಣೆ ಮಾಡಿ ಅವರ ಆದರ್ಶಗಳನ್ನು ಸ್ಮರಿಸಿದರು.