ಕೊಲ್ಲಮೊಗ್ರು: ಬೆಂಡೋಡಿ ಸೇತುವೆಯ ಸಂಪರ್ಕ ರಸ್ತೆ ಮರು ನಿರ್ಮಾಣ

0

ಭಾರಿ ಮಳೆಗೆ ಸುರಿದು ಕೊಚ್ಚಿ ಹೋಗಿದ್ದ ಬೆಂಡೋಡಿ ಸೇತುವೆ ಸಂಪರ್ಕ ಕಳೆದುಕೊಂಡು ಮೂರು ವಾರದ ಬಳಿಕ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ..

ಆ ಮೂಲಕ ಈ ಭಾಗದಲ್ಲಿರುವ 150 ಮನೆಯವರು 7 ಕಿ.ಮೀ ಸುತ್ತು ಬರುವ ಕಷ್ಟ ಇನ್ನು ತಪ್ಪಲಿದೆ. ಅಲ್ಲದೆ ಈ ಭಾಗದಲ್ಲಿರುವ ಬೆಂಡೋಡಿ ಕಿ.ಪ್ರಾ. ಶಾಲೆಯಿದ್ದು ಅಲ್ಲಿಗೆ ಬರುವ ಶಿಕ್ಷಕಿ ಕೂಡ ಸೇತುವೆ ದಾಟಿ ನಡೆದು ಬರುತಿದ್ದು ಅವರ ಪಾಲಿಗೂ ಸಂಪರ್ಕ ರಸ್ತೆ ವರವಾಗಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಹಾಗೂ ಇಂಜಿನಿಯರ್ ಅವರ ಸೂಚನೆ ಮೇರೆಗೆ ಮುಂಗಡ ಕೆಲಸ ಎಂದು ಪರಿಗಣಿಸಿ ಕೆಲಸವನ್ನು ಮಾಡಲಾಗಿದೆ. ಮಾದವ ಚಾಂತಾಳ ಅವರು ಕೆಲಸವನ್ನು ನಿರ್ವಹಿಸಿದ್ದರು.