ಅಜ್ಜಾವರ : ಹಡಿಲು ಗದ್ದೆಯಲ್ಲಿ ಭತ್ತದ ನಾಟಿ

0

ಗ್ರಾ.ಪಂ., ಯುವಕ-ಯುವತಿ ಮಂಡಲಗಳು, ವಿದ್ಯಾರ್ಥಿಗಳು ಭಾಗಿ

ಗ್ರಾಮ ಪಂಚಾಯತ್ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ,ಸರಕಾರಿ ಪ್ರೌಢಶಾಲೆ ಅಜ್ಜಾವರ, ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ , ಓಂ ಫ್ರೆಂಡ್ಸ್ ಅಜ್ಜಾವರ ಇದರ ಜಂಟಿ ಆಶ್ರಯದಲ್ಲಿ ಹಡಿಲು ಗದ್ದೆ ಯಲ್ಲಿ ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಅಜ್ಜಾವರದ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಿತು.ಸುಮಾರು ಹದಿನೈದು ವರ್ಷಗಳಿಂದ ಹಡಿಲು ಬಿದ್ದ ಗದ್ದೆಯನ್ನು ಒಂದೂವರೆ ತಿಂಗಳಿಂದ ಶ್ರಮ ಪಟ್ಟು ಹದಗೊಳಿಸಿ ಒಂದು ಎಕರೆ 5 ಸೆನ್ಸ್ ವಿಶಾಲವಾದ ಜಾಗದಲ್ಲಿ ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಗದ್ದೆಯ ಮಾಲೀಕರಾದ ಸವೇರಾ ರೈ, ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್,ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ನವೀನ್ ಕುಮಾರ್ ,

ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಓಂ ಫ್ರಂಡ್ಸ್ ಅಧ್ಯಕ್ಷರಾದ ವಿನಯ ನಾರಲು, ಸರಕಾರಿ ಪ್ರೌಢಶಾಲೆ ಅಜ್ಜಾವರ, ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಇಲ್ಲಿಯ ಶಿಕ್ಷಕಿಯರು, ಮಕ್ಕಳು,ಅಜ್ಜಾವರ ಅಂಗನವಾಡಿ ಕೇಂದ್ರದ ಪುಟಾಣಿಗಳು,ಧರ್ಮಸ್ಥಳ ಗ್ರಾಮಾಭಿರುದ್ಧಿ ಒಕ್ಕೂಟ ಅಜ್ಜಾವರ ಇದರ ಪದಾಧಿಕಾರಿಗಳು, ಯುವಕ, ಯುವತಿ ಮಂಡಲ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡರು.