ಉಪಾಧ್ಯಕ್ಷರಾಗಿ ಪ್ರತಿಮಾ ಹೆಬ್ಬಾರ್ ಅವಿರೋಧ ಆಯ್ಕೆ
ಮಂಡೆಕೋಲು ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಕುಶಲ ಉದ್ದಂತಡ್ಕ ಹಾಗೂ ಉಪಾಧ್ಯಕ್ಷರಾಗಿ ಪ್ರತಿಮಾ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆ ಕುಶಲ ಉದ್ದಂತಡ್ಕರನ್ನು ಸದಸ್ಯೆ ವಿನುತಾ ಪಾತಿಕಲ್ಲು ಸೂಚಿಸಿದರೆ, ಉಪಾಧ್ಯಕ್ಷತೆ ಪ್ರತಿಮಾ ಹೆಬ್ಬಾರ್ ರನ್ನು ಸದಸ್ಯ ಅನಿಲ್ ತೋಟಪ್ಪಾಡಿ ಸೂಚಿಸಿದರು. ಅಧ್ಯಕ್ಷ – ಉಪಾಧ್ಯಕ್ಷತೆ ಒಂದೊಂದೇ ನಾಮಪತ್ರ ಸ್ವೀಕಾರಗೊಂಡಿರುವುದರಿಂದ ಅವಿರೋಧವಾಗಿ ಆಯ್ಕೆ ನಡೆದಿರುವುದಾಗಿ ಚುನಾವಣಾಧಿಕಾರಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಶಿಕ್ಷಕ ಡಾ.ಸುಂದರ ಕೇನಾಜೆ ಘೋಷಣೆ ಮಾಡಿದರು. ಪಿಡಿಒ ರಮೇಶ್ ಸಹಕರಿಸಿದರು.
ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ನಾರಾಯಣ ಕೆದ್ಕಾರ್, ತಾರನಾಥ ಕೊಡೆಂಚಿಕಾರ್, ದಿನೇಶ್ ಅಕ್ಕಪ್ಪಾಡಿ, ದಿವ್ಯಲತಾ ಚೌಟಾಜೆ, ಉಷಾ ಗಂಗಾಧರ್, ರಾಧಿಕ ಮೈತಡ್ಕ, ವಸಂತಿ, ತಿಲಕ ಕುತ್ಯಾಡಿ, ಶಶಿಕಲ ಕುಂಟಿಕಾನ, ಗೀತಾ ಸುಂದರ್ ಇದ್ದರು.