ಮಹಮ್ಮದ್ ಪರಪ್ಪ ನಿಧನ

0

ಸುಳ್ಯದಲ್ಲಿ ಈ ಹಿಂದೆ ಉದ್ಯಮ ನಡೆಸುತ್ತಿದ್ದ ಸುಳ್ಯ ಗಡಿಪ್ರದೇಶ ಪರಪ್ಪೆ ನಿವಾಸಿ ಸುಳ್ಯ ಗಾಂಧಿನಗರದಲ್ಲಿರುವ ಗ್ಲೋಬಲ್ ಟೈಲ್ಸ್ ಮಳಿಗೆಯ ಮಾಲಕ ಝೈನುದ್ದೀನ್ ರವರ ತಂದೆ ಮಹಮ್ಮದ್ ಪರಪ್ಪರವರು ಅಲ್ಪಕಾಲದ ಅಸೌಖ್ಯದಿಂದ ಆ.10 ರಂದು ನಿಧನರಾದರು.

ಅವರಿಗೆ 76 ವರ್ಷ ವಯಸ್ಸಾಗಿತ್ತು.

ಮಹಮ್ಮದ್ ರವರು ಹಲವು ವರ್ಷಗಳ ಹಿಂದೆ ಸುಳ್ಯದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.