ದಕ್ಷಾ ಕೆ.ಎಸ್. ಕುಕ್ಕುಂಬಳ ಪ್ರತಿಷ್ಠಿತ ಜೆ.ಐ.ಪಿ.ಎಂ.ಇ.ಆರ್. ಗೆ ಆಯ್ಕೆ

0

ಕರ್ನಾಟಕದ ಇಬ್ಬರು ಮಾತ್ರ ಈ ವಿದ್ಯಾ ಸಂಸ್ಥೆಗೆ ಆಯ್ಕೆ

ಅರಂತೋಡಿನ ದಕ್ಷಾ ಕೆ. ಎಸ್. ಕುಕ್ಕುಂಬಳ ಇವರು ರಾಷ್ಟ್ರೀಯ ಖ್ಯಾತಿಯ ವೈದ್ಯಕೀಯ ಕಾಲೇಜು ಜವಾಹರ್ ಲಾಲ್ ಇನ್ ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುವೇಟ್ ಮೆಡಿಕಲ್ ರೀಸರ್ಚ್ ಎಂ.ಬಿ.ಬಿ. ಎಸ್ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.

ಇವರು ನೀಟ್ ಪರೀಕ್ಷೆಯಲ್ಲಿ 680 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಈ ಅವಕಾಶ ಪಡೆದುಕೊಂಡಿದ್ದಾರೆ.‌ ಕರ್ನಾಟಕದ ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಈ ಕಾಲೇಜಿನಲ್ಲಿ ಅಧ್ಯಯನ ಮಾಡಲು ಆಯ್ಕೆ ಯಾಗಿದ್ದಾರೆ.

ದಕ್ಷಾ ರವರು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ ಹಾಗೂ ಸೀಮಾ ದಂಪತಿಯ ಪುತ್ರಿ.