ಅಧ್ಯಕ್ಷ ಆಯ್ಕೆ ಮತ್ತೆ ಮುಂದೂಡಿಕೆ
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಮತ್ತೆ ಮುಂದೂಡಲ್ಪಟ್ಟಿದೆ. ಈ ಮೂಲಕ ಅಧ್ಯಕ್ಷರ ಆಯ್ಕೆ ಕೂತಹಲ ಕೆರಳಿಸಿದೆ.
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷತೆಗೆ ಇಂದು ಸುಲೋಚನಾ ದೇವ ಮತ್ತು ಪ್ರೇಮಲತಾ ಕೇರ ನಾಮಪತ್ರ ಸಲ್ಲಿಸಿದ್ದರು. ಆದರೆ ನಿನ್ನೆ ಬಿಜೆಪಿ ಜಿಲ್ಲಾಧ್ಯಕ್ಷರು ಬಂದು ಸಭೆ ನಡೆಸಿದ ಬೆನ್ನಲ್ಲೇ ಕೆಲವೊಂದು ವಿದ್ಯಾಮಾನಗಳು ನಡೆದು ಇಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡುವ ತೀರ್ಮಾನಕ್ಕೆ ಬಂದರೆನ್ನಲಾಗಿದೆ.
ಅದರಂತೆ ಇಂದು ನಿಗದಿಯಾಗಿದ್ದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಇಂದು ದಿನ ನಿಗದಿಯಾಗಿದ್ದ ಕಾರಣ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಲೋಚನಾ ದೇವ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ಕೇರ ನಾಮಪತ್ರ ಸಲ್ಲಿಸಿ ಹಿಂಪಡೆದರೆಂದು ತಿಳಿದು ಬಂದಿದೆ.
ಪಕ್ಷದ ತೀರ್ಮಾನದಂತೆ ನಾವು ನಾಮಪತ್ರ ಸಲ್ಲಿಸಿ ಹಿಂಪಡೆದಿದ್ದೇನೆ – ಪ್ರೇಮಲತಾ ಕೇರ
ನಾವೆಲ್ಲಾ ಒಟ್ಟಾಗಿದ್ದೇವೆ. ಎಲ್ಲಾ ಸದಸ್ಯರ ತೀರ್ಮಾನದಂತೆ ನಾನು ನನ್ನ ನಾಮಪತ್ರ ಹಿಂಪಡೆದಿದ್ದೇನೆ – ಸುಲೋಚನಾ ದೇವ
ದೇವಚಳ್ಳ ಪಂಚಾಯತ್ ನಲ್ಲಿರುವ 10 ಸದಸ್ಯರು ಒಟ್ಟಾಗಿದ್ದಾರೆ. ರಾಜ್ಯಧ್ಯಕ್ಷರ ನಿರ್ದೇಶನದಂತೆ ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರಿದ್ದು ನಡೆದ ಸಭೆಯಲ್ಲಿ ಕೆಲವರ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲಾಗಿದೆ. ಪಕ್ಷದ ತೀರ್ಮಾನದಂತೆ ಅಧ್ಯಕ್ಷರ ಆಯ್ಕೆ ಯಾವುದೇ ಗೊಂದಲ ಇಲ್ಲದ ರೀತಿಯಲ್ಲಿ ನಡೆಯುತ್ತದೆ.
- ಶ್ರೀಕಾಂತ್ ಮಾವಿನಕಟ್ಟೆ, ಸ್ಥಳೀಯ ಬಿಜೆಪಿ ಮುಖಂಡರು