ತೊಡಿಕಾನದಲ್ಲಿ ನಡೆದ ಅನೈತಿಕ ಪೋಲೀಸ್ ಗಿರಿ ಖಂಡನೀಯ : ಬ್ಲಾಕ್ ಕಾಂಗ್ರೆಸ್

0

ಆಗಸ್ಟ್ ೧೨ರಂದು ಸಂಜೆ ತೊಡಿಕಾನದಲ್ಲಿ ನಡೆದ ಅನೈತಿಕ ಪೋಲೀಸ್ ಗಿರಿಯನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ಯಾರು ನಡೆಸಿದರೂ ಖಂಡಿಸುತ್ತೇವೆ. ಜತೆಗೆ ಕಾನೂನನ್ನು ಕೈಗೆತ್ತಿಕೊಂಡು ಮಾಡುವ ಅನೈತಿಕ ಪೋಲೀಸ್ ಗಿರಿಯನ್ನು ಕೂಡಾ ಖಂಡಿಸುತ್ತೇವೆ.

ಯಾರಾದರೂ ತಪ್ಪು ಮಾಡಿದ್ದರೆ ಅದನ್ನು ಶಿಕ್ಷಿಸಲು ಇಲಾಖೆ ಇದೆ. ಇಲಾಖೆಯ ಕೆಲಸ ಇತರರು ಮಾಡಬಾರದು. ಅವರಿಗೆ ವಿಷಯ ತಿಳಿಸುವ ಕೆಲಸವನ್ನು ಮಾತ್ರ ಮಾಡಬೇಕು. ಘಟನೆಯನ್ನು ಕೂಲಂಕುಶವಾಗಿ ತನಿಖೆ ಮಾಡಿ ನೈಜ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.