ಕಳಂಜ ಗ್ರಾಮದ ಕೊಲ್ಲರ್ನೂಜಿ, ಕೋಟೆ ದೇವಸ್ಥಾನ ರಸ್ತೆಯ ಶೇಡಿಕಜೆ ಎಂಬಲ್ಲಿ ಡಾಮರು ಎದ್ದು ಹೋಗಿ, ಹೊಂಡಗುಂಡಿ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಡಕಾಗುತ್ತಿತ್ತು.
ಅಲ್ಲದೆ ಕಾಂಕ್ರೀಟ್ ಆರಂಭಗೊಂಡ ಜಾಗದಲ್ಲಿ ಹಂಪ್ ನಿರ್ಮಾಣ ಆಗಿ ವಾಹನದ ಅಡಿಭಾಗಕ್ಕೆ ತಾಗುತ್ತಿತ್ತು. ಇದನ್ನು ಅರಿತ ಸ್ಥಳೀಯರಾದ ಕಳಂಜ ಗ್ರಾಮದ ಇಸ್ಮಾಯಿಲ್ ಕಳಂಜ ಎನ್ನುವವರು ಏರು ತಗ್ಗು ಇದ್ದ ರಸ್ತೆಯ ಭಾಗಗಳಲ್ಲಿ ಕಲ್ಲುಮಣ್ಣು ತುಂಬಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.