ಸಂಪಾಜೆ: ಕಲ್ಲುಗುಂಡಿ ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಭಾರತದ ಎಪ್ಪತ್ತೇಳನೆ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಆಲಿ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಸ್ಥೆಯ ಪ್ರಾಂಶುಪಾಲರಾದ ಅಹ್ಮದ್ ನಈಂ ಫೈಝಿ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು , ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರ ನೈಜ ಚರಿತ್ರೆಯನ್ನು ಕಲಿತು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮಗಿದೆ. ಅದರಲ್ಲೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ವನಿತೆಯರ ಚರಿತ್ರೆಗಳು ನಮಗೆ ಸದಾ ಸ್ಪೂರ್ತಿ ಆಗಬೇಕು ಎಂದರು .
ಸಂಸ್ಥೆಯ ಪ್ರಾಧ್ಯಾಪಕರಾದ ರಿಯಾಝ್ ಫೈಝಿ ಪೇರಡ್ಕ ಪ್ರಾಸ್ತಾವಿಕ ಭಾಷಣ ನಡೆಸಿದರು . ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸೈನಾರ್ ಎ.ಕೆ , ಪ್ರಾಧ್ಯಾಪಕಿಯರಾದ ಹಬೀಬಾ ಅಝ್ಝಾಹಿರಾ ಹಾಗೂ ಸೋನಿಯಾ ಶುಭ ಹಾರೈಸಿದರು .ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಭಾಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು .
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ತಫ್ಸೀಲಾ ಸ್ವಾಗತ ಭಾಷಣ ನಡೆಸಿದರು. ಫಾತಿಮತ್ ಶಿಫಾ ಕಿರಾಅತ್ ಪಠಿಸಿ, ಆಶಿಫಾ ವಂದಿಸಿದರು.